Districts

SUICIDE: ಪ್ರೀತಿಗೆ ಪೋಷಕರ ವಿರೋಧ; ಪ್ರೇಮಿಗಳಿಬ್ಬರು ಆತ್ಮಹತ್ಯೆ

ಮೈಸೂರು: ಮೈಸೂರಿನಲ್ಲಿ ಇಬ್ಬರು ಪ್ರೇಮಿಗಳು ನೇಣಿಗೆ ಕೊರಳೊಡ್ಡಿದ್ದಾರೆ. ಪ್ರೀತಿಗೆ ಮನೆಯವರು ನಿರಾಕರಿಸಿದ್ದರಿಂದಾಗಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿಗೆ ಸಮೀಪದ ಸಿಂಗಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಅರ್ಚನಾ ಹಾಗೂ ರಾಕೇಶ್‌ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರಿಬ್ಬರು ಹಲವು ತಿಂಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಇವರ ಮದುವೆಗೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share Post