ಮತ್ತೆ ಮುನ್ನಲೆಗೆ ಬಂದ ಜಿನ್ನಾ ಟವರ್ ವಿವಾದ:ಧ್ವಜ ತೆರವು ಮಾಡಿದ್ದಕ್ಕೆ ಕಿಡಿ
ಗುಂಟೂರು: ಇನ್ನೇನು ಮುಗಿದೇ ಹೋಯು ಅಂದುಕೊಂಡಿದ್ದ ಗುಂಟೂರು ಜಿನ್ನಾ ಟವರ್ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಗುಂಟೂರಿನ ಮಧ್ಯ ಭಾಗದಲ್ಲಿರುವ ಸ್ತೂಪದ ಹೆಸರನ್ನು ಬದಲಾಯಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ರು. ದೇಶ ವಿಭಜನೆಗೆ ಕಾರಣರಾದ ಜಿನ್ನಾ ಹೆಸರಿನಲ್ಲರುವ ಈ ಸ್ಥೂಪದ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೂ ಮನವಿ ಸಲ್ಲಿಸಿದ್ರು.
ಈ ವಿವಾದ ಈಗ ಮುನ್ನೆಲೆಗೆ ಬಂದಿದೆ. ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜ ತೆಗೆದಿರುವುದು ಗೊಂದಲಕ್ಕೆ ಕಾರಣವಾಗಿದೆ. ಜಿನ್ನಾ ಟವರ್‌ಗೆ ಅಬ್ದುಲ್ ಕಲಾಂ ಟವರ್ ಎಂದು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತ್ರಿವರ್ಣ ಬಣ್ಣ ಹಚ್ಚಲಾಗಿತ್ತು.
ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ವತಿಯಿಂದ ಧ್ವಜಸ್ತಂಭಕ್ಕೆ ತ್ರಿವರ್ಣ ರಂಗು ಹಚ್ಚಿ, ಗೃಹ ಸಚಿವರು ಸೇರಿದಂತೆ ಹಲವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಆದರೆ ಈಗ ಬ್ಯಾರಿಕೇಡ್ ಸೇರಿದಂತೆ ರಾಷ್ಟ್ರಧ್ವಜ ತೆರವು ಮಾಡಿದ್ದು, ಧ್ವಜ ತೆಗೆದಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸಿ ಆತಂಕದ ವಾತಾವರಣ ಕಂಡುಬರುತ್ತಿದೆ.
ಜಿನ್ನಾ ಗೋಪುರಕ್ಕೆ ರಾಷ್ಟ್ರಧ್ವಜ ಹಾಗೂ ಅಶೋಕ ಚಕ್ರದ ಬಣ್ಣ ಬಳಿಯಬೇಕು ಎಂದು ಶಾಸಕ ಮುಸ್ತಫಾ ನೇತೃತ್ವದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಸೂಚಿಸಿದ್ದಾರೆ.