International

ಕಾಯಬೇಡಿ, ಕೂಡಲೇ ಸ್ವದೇಶಕ್ಕೆ ಹಿಂದಿರುಗಿ-ವಿದ್ಯಾರ್ಥಿಗಳಿಗೆ ಇಂಡಿಯನ್‌ ಎಂಬಸಿ ಸೂಚನೆ

ಉಕ್ರೇನ್:‌ ರಷ್ಯಾ .. ಉಕ್ರೇನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಫೆಬ್ರವರಿ 22 ರಂದು ಪ್ರಮುಖ ಹೇಳಿಕೆಯನ್ನು ನೀಡಿದೆ. ಭಾರತೀಯ ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿಗಳ ಅನುಮತಿಗೆ ಕಾಯದೆ ಈ ತಕ್ಷಣವೇ ಭಾರತಕ್ಕೆ ಹಿಂತಿರುಗಬೇಕೆಂಬ ಸೂಚನೆಯನ್ನು ನೀಡಿದೆ.

‘ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತವೆಯೇ ಎಂಬ ಅನುಮಾನ ವ್ಯಕ್ತಪಡಿಸಿ ಭಾರತೀಯ ರಾಯಭಾರ ಕಚೇರಿಗೆ ಕರೆಗಳು ಬರುತ್ತಿವೆ.  ಭಾರತೀಯ ವಿದ್ಯಾರ್ಥಿ ಶಿಕ್ಷಣ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ರಾಯಭಾರ ಕಚೇರಿ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಉಕ್ರೇನ್ ತೊರೆಯುವಂತೆ ಇಂಡಿಯನ್‌ ಎಂಬಸಿ ಒತ್ತಾಯಿಸಿದೆ.

ಫೆಬ್ರವರಿ 20 ರಿಂದ ಉಕ್ರೇನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದಾಗಿ ಇಲ್ಲಿ ಉಳಿದುಕೊಂಡಿರುವ ಎಲ್ಲಾ ಭಾರತೀಯರು ಹೊರಡುವುದು ಸೂಕ್ತ. ಭಾರತೀಯ ವಿದ್ಯಾರ್ಥಿಗಳು ಇಲ್ಲಿರುವುದು ಅನಿವಾರ್ಯವಲ್ಲ. ಉಕ್ರೇನ್ ಅನ್ನು ತಾತ್ಕಾಲಿಕವಾಗಿ ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನದಲ್ಲಿ ಏರ್ ಇಂಡಿಯಾದ ಒಟ್ಟು ಮೂರು ವಿಮಾನಗಳು ಕಾರ್ಯ ನಿರ್ವಹಿಸಲಿದೆ. ಇದರ ಭಾಗವಾಗಿ ಮಂಗಳವಾರ ಬೆಳಗ್ಗೆ 7:36ಕ್ಕೆ ನವದೆಹಲಿ ಐಜಿಐ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಹೊರಟಿದೆ.

Share Post