Cinema

ಪೌರಾಣಿಕ ಸಿನಿಮಾದಲ್ಲಿ ಸ್ಯಾಮ್‌ ನಟನೆ-ಶಾಕುಂತಲೆಯಾಗಿ ಮಿಂಚಿದ ಸಮಂತಾ

ಹೈದರಾಬಾದ್:‌ ನಾಯಕಿ ನಟಿಯಾಗಿ ಸಮಂತಾ ರುತ್‌ ಪ್ರಭು ಮೊದಲ ಬಾರಿಗೆ ಪೌರಾಣಿಕ ಚಿತ್ರ  ‘ಶಾಕುಂತಲಂ’ನಲ್ಲಿ ನಟಿಸುತ್ತಿದ್ದಾರೆ. ಕ್ರಿಯೇಟಿವ್ ಡೈರೆಕ್ಟರ್ ಗುಣಶೇಖರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಕುಂತಲಾ ಪಾತ್ರದಲ್ಲಿ ಸಮಂತಾ ಮತ್ತು ದುಷ್ಯಂತ್ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅಲ್ಲು ಅರ್ಜುನ್ ಪುತ್ರಿ ಅಲ್ಲು ಆರ್ಹ ಅರ್ಜುನ್ ಎಂಟ್ರಿ ಕೊಡುತ್ತಿದ್ದು, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ದಿಲ್ ರಾಜು, ನೀಲಿಮಾ ಗುಣ ನಿರ್ಮಿಸಿರುವ ಈ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ಸಿನಿಮಾ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ಅದರ ಭಾಗವಾಗಿ ಸೋಮವಾರ ಶಕುಂತಲಂ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಇದರಲ್ಲಿ ಸಮಂತಾ ಯಕ್ಷಿಣಿಯಂತೆ ಕಾಣುತ್ತಿದ್ದಾರೆ. ಸುತ್ತಲೂ ಜಿಂಕೆ, ನವಿಲುಗಳ  ಮಧ್ಯದಲ್ಲಿ ಸಮಂತಾ ಲುಕ್ ಆಕರ್ಷಕವಾಗಿದೆ. ಫಸ್ಟ್ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಸಮಂತಾ ದೇವಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ.ನಿರ್ದೇಶಕರು ಸಮಂತಾ ಪಾತ್ರವನ್ನು ಹೇಗೆ ರೂಪಿಸಿದ್ದಾರೆ ಎಂಬುದಕ್ಕೆ ಈ ಫಸ್ಟ್ ಲುಕ್ ಸಾಕ್ಷಿಯಾಗಿದೆ.

ಗುಣಶೇಖರ್ ಈ ಚಿತ್ರವನ್ನು ತೆರೆಗೆ ತರುವಲ್ಲಿ ಉತ್ಸುಕರಾಗಿದ್ದಾರೆ. ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಗೆ ಹೆಚ್ಚಿನ ಒತ್ತು ನೀಡಿ ಪೀರಿಯಾಡಿಕ್ ಡ್ರಾಮಾ ಆಗಿ ತೆರೆಗೆ ಬರಲಿರುವ ಈ ಸಿನಿಮಾಗಾಗಿ ದಿಲ್ ರಾಜು ಹಾಗೂ ಗುಣಶೇಖರ್ ಸಾಕಷ್ಟು ಖರ್ಚು ಮಾಡಿದ್ದಾರೆ ಎಂಬುದು ಇಂಡಸ್ಟ್ರಿ  ಟಾಕ್‌. ಕರೋನಾ ಎಫೆಕ್ಟ್‌ನಿಂದಾಗಿ ಅನೇಕ ತೊಂದರೆಗಳ ನಡುವೆಯೂ.. ಗುಣಶೇಖರ್ ಚಿತ್ರವನ್ನು ಮುಗಿಸಿ ನಿರೀಕ್ಷೆಯಂತೆ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

Share Post