Bengaluru

ವಿರೋಧ ಪಕ್ಷವಾಗಿರಲು ಕಾಂಗ್ರೆಸ್‌ಗೆ ಯಾವ ನೈತಿಕತೆಯೂ ಇಲ್ಲ-ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸೃಷ್ಟಿ ಮಾಡ್ತಿರುವ ಗೊಂದಲ ಅಷ್ಟಿಷ್ಟಲ್ಲ. ಅವರು ಆಡಳಿತ ಪಕ್ಷವಾಗಿ ಅಲ್ಲ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ಯಾವುದೇ ರೀತಿಯ ನೈತಕತೆ ಅವರಿಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಕರ್ನಾಟಕ ಮರಾಠ ವೆಲ್‍ಫೇರ್ ಅಸೋಶಿಯೇಷನ್ (ರಿ) ವತಿಯಿಂದ ಸದಾಶಿವನಗರದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಸ್ಮಾರಕದ ಬಳಿ ಆಯೋಜಿಸಿರುವ “ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 395ನೇ ಜಯಂತೋತ್ಸ”ವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಕಾಂಗ್ರೆಸ್‌ ಧರಣಿ ಹಾಗೂ ಹಿಜಾಬ್‌ ಕುರಿತು ಮಾಹಿತಿ ನೀಡಿದ್ರು.

ಹೈಕೋರ್ಟ್‌ ಕೊಟ್ಟಿರುವ ಆದೇಶವನ್ನು ಎಲ್ಲರೂ ಪರಿಪಾಲನೆ ಮಾಡಬೇಕು. ಹೊರಗಿನ ಜನ ಹೋಗಿ ಗೊಂದಲ ಸೃಷ್ಟಿ ಮಾಡ್ತಿದಾರೆ. ಹೊರಗಿನವರು ಹೋಗದೆ ಇದ್ರೆ ಅಲ್ಲಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಪೋಷಕರು ಸೇರಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಪಡೆದುಕೊಳ್ಳುತ್ತೇನೆ. ಆದರೆ ಈ ಸೃಷ್ಟಿಯಾಗಿರುವ ವಾತಾವರಣ ತಿಳಿಯಾಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಕಾಂಗ್ರಸ್‌ ನಾಯಕರ ಅಹೋರಾತ್ರಿ ಧರಣಿ ವಿಚಾರವಾಗಿ ಮಾತನಾಡಿ, ಒಂದೇ ಮಾತಲ್ಲಿ ಹೇಳ್ತೀನಿ ಕಾಂಗ್ರೆಸ್‌ ಆಡಳಿತ ಪಕ್ಷವಾಗಿ ಅಲ್ಲ, ವಿರೋಧ ಪಕ್ಷವಾಗಿ ಇರಲೂ ಕೂಡ ನೈತಿಕತೆ ಕಳೆದುಕೊಂಡಿದೆ ಎಂದು ಕಿಡಿ ಕಾರಿದ್ರು.

Share Post