ಹಿಜಾಬ್ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಉಚ್ಛ ನ್ಯಾಯಾಲಯ-ಇಂದೂ ಸಿಗಲಿಲ್ಲ ತೀರ್ಪು
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಅಂತ್ಯ ಸಿಗುತ್ತಿಲ್ಲ. ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದತು, ಶಾಲಾ-ಕಾಲೇಜುಗಳಲ್ಲಿ ಪ್ರತಿಭಟನೆ ಮಾತ್ರ ನಿಲ್ಲುತ್ತಿಲ್ಲ. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದನ್ನೇ ಬಿಟ್ಟಿದ್ದಾರೆ. ಪರೀಕ್ಷೆ ಕೂಡ ಕೆಲವರು ಬಹಿಷ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡಲು ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ಕೂಡ ವಿಚಾರಣೆ ನಡೆದಿದ್ದು, ಮತ್ತಷ್ಟು ವಾದ/ ವಿವಾದಗಳನ್ನು ಮುಂದುವರೆಸಲು ಕೋರ್ಟ್ ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 2.30ಕ್ಕೆ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ.
ವಕೀಲರ ವಾದ
ಪ್ರಭುಲಿಂಗ ನಾವದಗಿ
ಸರ್ಕಾರ ಈ ಬಗ್ಗೆ ಆದೇಶ ಹೊರಡಿಸುವ ಮೊದಲೇ ರಿಟ್ ಅರ್ಜಿ ಸಲ್ಲಿಸಲಾಯ್ತು. ಅರ್ಜಿ ಸಲ್ಲಿಸಿದ್ರೂ ಕಾಲೇಜಿನಲ್ಲಿ ಪ್ರತಿಭಟನೆ ಮುಂದುವರೆಯಿತು. ಸಮವಸ್ತ್ರ ವಿಚಾರದಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತು. ಉಡುಪಿಯ ಕಾಲೇಜಿನ ವಿವಾದ ರಾಜ್ಯಕ್ಕೆ ಪಡರಿಸಿತು. ಉನ್ನತ ಸಮಿತಿ ರಚಿಸುತೇವೆಂದರೂ ಕೇಳಲಿಲ್ಲ. ಹೀಗಾಗಿ ಸರ್ಕಾರ ಆದೇಶ ಹೊರಡಿಸಬೇಕಾಯಿತು. ಸರ್ಕಾರಿ ಆದೇಶದಿಂದ ಈ ಹಕ್ಕಿಗೆ ಧಕ್ಕೆಯಾಗಿಲ್ಲ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಆಡಳಿತ ಮಂಡಳಿ ನಿರ್ಧರಿಸಿದ ಸಮವಸ್ತ್ರ ಧರಿಸಬೇಕು. ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಉಚಿತ ಸಮವಸ್ತ್ರ ನೀಡುತ್ತಿದೆ. ಕಾಲೇಜುಗಳಲ್ಲಿ ಅಭಿವೃದ್ಧಿ ಮಂಡಳಿ ನೀಡಿದ ಸಮವಸ್ತ್ರ ಧರಿಸಬೇಕು. ಸಮವಸ್ತ್ರ ನಿಗದಿಪಡಿಸದ ಕಾಲೇಜುಗಳಲ್ಲಿ ಗೌರವಯುತ ಸಮವಸ್ತ್ರ ಧರಿಸಲು ಆದೇಶ ಸಮಾನತೆ ಶಿಸ್ತಿಗೆ ಪೂರಕವಾದ ಸಮವಸ್ತ್ರ ಧರಿಸಲು ಸೂಚನೆ ನೀಡಲಾಗಿದೆ.
ಸಿಜೆ: ಹಿಜಾಬ್ ಕಡ್ಡಾಯವಲ್ಲ ಎಂದು ಏಕೆ ಹೇಳಿದ್ದೀರಿ, ಆದೇಶದಲ್ಲಿ ಇದನ್ನು ಹೇಳುವ ಅಗತ್ಯ ಏನಿತ್ತು..?ಹಿಜಾಬ್‌ಗೆ ಅನುಮತಿ ನೀಡದ್ರೆ ನಿಮ್ಮ ಆಕ್ಷೇಪವಿಲ್ಲವೇ..?
ನಾವು ಹಿಜಾಬ್ ವಿಚಾರವನ್ನೂ ಸಮಿತಿಗೆ ನೀಡಿದ್ದೇವೆ. ಅಂತಹ ದೂರುಗಳು ಬಂದರೆ ಸಮಿತಿ ಪರಿಗಣಿಸಲಿದೆ.
ನ್ಯಾ.ಕೃಷ್ಣ ದೀಕ್ಷಿತ್: ಸಾವಿರಾರು ಅರ್ಜಿಗಳು ದಾಖಲಾಗಲಿ ಎಂದು ಹೇಳುತ್ತಿದ್ದೀರಾ..? ಹಿಜಾಬ್ ಬಗ್ಗೆ ಸ್ಪಷ್ಟ ನಿಲುವನ್ನು ನೀವು ತಿಳಿಸಿಲ್ಲ. ಸರ್ಕಾರಿ ಆದೇಶದಲ್ಲಿ ನೇರವಾಗಿ ಹೇಳಿಲ್ಲ, ಸರ್ಕಾರ ಧಾರ್ಮಿಕ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಬಯಸಿರಲಿಲ್ಲ. ಸಿಡಿಸಿಗೆ ಅನುಮತಿ ನೀಡಿದ್ದೇವೆ ಅಂದಿದ್ದೀರಿ ಹಾಗಿದ್ದ ಮೇಲೆ ಕೋರ್ಟ್ ತೀರ್ಪುಗಳ ಉಲ್ಲೇಖದ ಅವಶ್ಯಕತೆ ಏನಿತ್ತು..? ಸರ್ಕಾರದ ಆದೇಶವನ್ನು ಉಪೇಕ್ಷಿಸಿ ಸಮಿತಿ ನಿರ್ಧರಿಸಬಹುದೇ..? ನ್ಯಾಯಮೂರ್ತಿ ಪ್ರಶ್ನೆ
ನಾವು ಆ ತೀರ್ಪುಗಳನ್ನು ಉಲ್ಲೇಖಸಿದೆ ಇರಬಹುದಿತ್ತು. ಅಧಿಕಾರಿಗಳು ಏಕೆ ಉಲ್ಲೇಖ ಮಾಡಿದ್ರೋ ಗೊತ್ತಿಲ್ಲ. ಆದರೆ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ. ಸಿಡಿಸಿಗೆ ಅನುಮತಿ ನೀಡಿದೆ.
ಸರ್ಕಾರದ ಆದೇಶಗಳು ವೈನ್‌ನಂತೆ ಅಲ್ಲ..ಹಳೆಯದಾದಂತೆ ಅವು ಉತ್ತಮಗೊಳ್ಳುವುದಿಲ್ಲ ಸುಪ್ರೀಂಕೋರ್ಟ್ ಆದೇಶ ಉಲ್ಲೇಖ ಮಾಡಿದ ಕೃಷ್ಣ ದೀಕ್ಷಿತ್.
ಸಿಜೆ: ಒಂದು ಕಡೆ ಸಮವಸ್ತ್ರದ ಉನ್ನತ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದೀರಿ. ಒಂದು ಕಡೆ ಸಿಡಿಸಿಗೆ ಅಧಿಕಾರ ಕೊಟ್ಟಿದ್ದಾಗಿ ತಿಳಿಸಿದ್ದೀರಿಇದು ಸರ್ಕಾರದ ವಿರೋಧಭಾಸದ ಹೇಳಿಕೆಯಲ್ಲವೇ..?
ಪರಿಸ್ಥಿತಿಯ ಆಧಾರದಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಮೊದಲಿಗೆ ಸರ್ಕಾರಕ್ಕೆ ಸಮವಸ್ತ್ರ ಸಂಹಿತೆ ತರುವ ಉದ್ದೇಶ ಇರಲಿಲ್ಲ. ಶಿಕ್ಷಣ ಕಾಯ್ದೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಕಾಲೇಜು ಅಭಿವೃದ್ದಿ ಸಮಿತಿಯಲ್ಲಿ ಎಲ್ಲರೂ ಇದ್ದಾರೆ. ಇದನ್ನು ಸರ್ಕಾರದ ಆದೇಶ ಎಂದು ಪರಿಗಣಿಸಬಹುದು. ಸಚಿವರ ಅನುಮೋದನೆ ನಂತರವೇ ಆದೇಶ ಎಂದು ಸರ್ಕಾರ ಪರ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿದ್ರು.