National

ಬಿಹಾರ: ಹಕ್ಕಿಜ್ವರ ಪ್ರಕರಣದಲ್ಲಿ ಏರಿಕೆ

ಬಿಹಾರದಲ್ಲಿ H5N1 ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಪ್ರಾಣಿ ಆರೋಗ್ಯ ಸಂಸ್ಥೆ ತಿಳಿಸಿದೆ. ವಿಶ್ವಪ್ರಾಣಿ ಆರೋಗ್ಯ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರದ ಪಾಟ್ನಾದ ಕೋಳಿ ಸಾಕಾಣಿಕೆ ಫಾರ್ಮ್‌ ಒಂದರಲ್ಲಿ ತಪಾಸಣೆ ನಡೆಸಿದ್ದು, 3859 ಕೋಳಿಗಳ ಪೈಕಿ 787 ಕೋಳಿಗಳು ವೈರಸ್‌ನಿಂದಾಗಿ ಸಾವಿಗೀಡಾಗಿದೆ ಎಂದು ತಿಳಿದು ಬಂದಿದೆ. ಈ ಕಾರಣ ಉಳಿದ ಕೋಳಿಗಳನ್ನು ಕೂಡ ನಾಶ ಪಡಿಸಲಾಗಿದೆ.

ಜನವರಿ 18 ರಂದು ಹಕ್ಕಿಜ್ವರ ವೈರಸ್‌ ಕಾಣಿಸಿಕೊಂಡಿತ್ತು ಆದ ಕಾರಣ ಫೆಬ್ರುವರಿ 18 ರಂದು ಎಲ್ಲಾ ಕೋಳಿಗಳನ್ನು ನಾಶಪಡಿಸಲಾಗಿದೆ. ಪ್ಯಾರಿಸ್‌ ಮೂಲದ OIE ಸಂಸ್ಥೆ, ಭಾರತದಲ್ಲಿನ ಅಧಿಕೃತ ಮೂಲಗಳು ಮತ್ತು ದತ್ತಾಂಶಗಳನ್ನು ಆಧರಿಸಿ ವರದಿ ಬಿಡುಗಡೆ ಮಾಡಿದೆ.

Share Post