Crime

ಹುಲಿ ಕೊಂದು ಚರ್ಮ ಮಾರಾಟಕ್ಕೆ ಯತ್ನ – ನಾಲ್ವರ ಬಂಧನ

ಮಡಿಕೇರಿ : ವಯಸ್ಸಾದ ಹುಲಿಯನ್ನು ಕೊಂದು ಅದರ ಚರ್ಮವನ್ನು ಮಾರಾಟ ಮಾಡಲು ಕೆಲವು ದುಷ್ಕರ್ಮಿಗಳು ಯತ್ನಿಸಿರುವ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

ಆರೋಪಿಗಳಾದ ರಮೇಶ್‌, ಮನು, ರಾಜೇಶ್‌ ಮತ್ತು ಹರೀಶ್‌ ಅವರು ವಯಸ್ಸಾದ ಹುಲಿಯನ್ನು ಕೊಂದು ಅದರ ಚರ್ಮ, ಉಗುರು ಹಾಗೂ ಪಾದಗಳನ್ನು ಕತ್ತರಿಸಿ ಮಾರಾಟ ಮಾಡಲು ಯತ್ನಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಅರಣ್ಯ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಹುಲಿಯ ಚರ್ಮ, 7ಉಗುರು, 2ಕಾಲನ್ನು ಅರಣ್ಯ ಪೊಲೀಸ್‌ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ತನಿಖೆ ಶುರು ಮಾಡಿರುವ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡಿದ್ದಾರೆ.

Share Post