Bengaluru

ಬುಧವಾರದಿಂದ ಪಿಯುಸಿ, ಪದವಿ ಕಾಲೇಜುಗಳು ಓಪನ್-ಶಿಕ್ಷಣ ಸಚಿವ

ಬೆಂಗಳೂರು: ಹಿಜಾಬ್‌ ವಿಚಾರದಿಂದಾಗಿ ಕಾಲೇಜುಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ ಮಾಡಿ ಬಳಿಕ 15ರವರೆಗೆ ರಜೆ ವಿಸ್ತರಣೆ ಮಾಡಿತ್ತು. ಈ ನಡುವೆ ಹೈಕೋರ್ಟ್ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಬಳಸದಂತೆ ಮಧ್ಯಂತರ ಆದೇಶವನ್ನು ಕೂಡಾ ಮಾಡಲಾಗಿತ್ತು. ಇಂದು 10ನೇ ತರಗತಿವರೆಗೂ ಶಾಲೆ ತೆರೆದಿದ್ದು, ಬುಧವಾರ ಪಿಯು, ಪದವಿ ತರಗತಿಗಳು ನಡೆಯುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿಯವರ ಜೊತೆ ಸಭೆ ಬಳಿಕ ಶಿಕ್ಷಣ ಸಚಿವ ನಾಗೇಶ್​ ಮಾತನಾಡಿ, ನಮ್ಮ ಪೋಷಕರು ಶಿಕ್ಷಣಕ್ಕೆ ತಡೆ ನೀಡುವುದು ಬೇಡ, ಕಾಲೇಜುಗಳು ಪ್ರಾರಂಭವಾಗಲಿ ಎಂದು ಹೇಳಿದ್ದಾರೆ. ಕೋರ್ಟ್​ ಆದೇಶ ಉಲ್ಲಂಘಿಸುವಂತಿಲ್ಲ, ಹೈಕೋರ್ಟ್​ ಆದೇಶ ಪಾಲಿಸಿ ಕಾಲೇಜು ಆರಂಭಿಸಲಾಗುತ್ತದೆ. ಇದೇ ಬುಧವಾರದಿಂದ ಪಿಯುಸಿ, ಪದವಿ ತರಗತಿಗಳು ಎಂದಿನಂತೆ ನಡೆಯಲಿವೆ ಎಂದು ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

Share Post