DistrictsHealth

ಛೇ..ಇದು ಸಾಯುವ ವಯಸ್ಸಾ…? ಕೋಲಾರದ ಬಳಿಕ ಕಾಫಿನಾಡಿನಲ್ಲಿ ಮತ್ತೊಂದು ಬ್ರೈನ್‌ ಡೆತ್

ಚಿಕ್ಕಮಗಳೂರು: ಮೊನ್ನೆ ಚೈತ್ರ ಇಂದು ಗಾನವಿ… ಕೋಲಾರದಲ್ಲಿ ನವಮಧುಮಗಳ ಬ್ರೈನ್‌ ಡೆತ್‌ ಘಟನೆ ನಡೆದು ಇನ್ನೂ 10ದಿನಗಳೂ ಕಳೆದಿಲ್ಲ ಆ ದುರಂತ ಘಟನೆ ಮಾಸುವ ಮುನ್ನವೇ ಅಥಂದ್ದೇ ಮತ್ತೊಂದು ದುರ್ಘಟನೆ ನಡೆದಿದೆ. ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿ ಬ್ರೈನ್‌ ಡೆತ್‌ ಆಗಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಯುವತಿಯ ಅಂಗಾಂಗ ದಾನ ಮಾಡಿ ಪೋಷಕರು ಮಾನವೀಯತೆ ಮೆರೆದಿದ್ದಾರೆ.

ಚಿಕ್ಕಮಗಳೂರಿನ ನರಸಿಂಹರಾಜಪುರ ತಾಲೂಕಿನ ಕೆರೆಮನೆಯ ಗಾನವಿ ಎಂಬ ಯುವತಿ ಕೃಷ್ಣೇಗೌಡ ಹಾಗೂ ಲೀಲಾವತಿ ದಂಪತಿಯ ಎರಡನೇ ಪುತ್ರಿ. ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರಂತೆ. ಹೀಗೆ ಕೆಲಸ ಮಾಡುವಾಗ ಫೆಬ್ರವರಿ 8ರಂದು ಕುಸಿದುಬಿದ್ದಿದ್ದಾರೆ. ಫೆಬ್ರವರಿ 12ರವರೆಗೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ..ದೇವರು ತುಂಬಾ ಕ್ರೂರಿ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾನೆ.  ನಿಮ್ಮ ಮಗಳ ಮೆದುಳು ನಿಷ್ಕ್ರಿಯವಾಗಿದೆ ಎಂಬ ಸುದ್ದಿಯನ್ನು ವೈದ್ಯರು ಗಾನವಿ ಪೋಷಕರಿಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗಾನವಿ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ನೋವಿನಲ್ಲೂ ಗಾನವಿ ಹೆತ್ತವರು ಮಾನವೀಯತೆ ತೋರಿದ್ದಾರೆ. ಆಕೆಯ ಅಂಗಾಂಗಳನ್ನು ದಾನ ಮಾಡಿದ್ದಾರೆ. ಯಕೃತ್, 2 ಕಿಡ್ನಿ, ಹೃದಯನಾಳಗಳು, 2 ಕಾರ್ನಿಯಾ ದಾನ ಮಾಡಿದ್ದಾರೆ. ಪೋಷಕರ ಈ ಸಮಾಜ ಮುಖಿ ಕಾರ್ಯಕ್ಕೆ ಆರೋಗ್ಯ ಸಚಿವ ಧನ್ಯವಾದ ತಿಳಿಸಿದ್ದು, ಗಾಣವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Share Post