Bengaluru

ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ: ತೀರ್ಪು ನೀಡುವವರೆಗೂ ಧಾರ್ಮಿಕ ಗುರುತು ಧರಿಸದಂತೆ ಮೌಖಿಕ ಆದೇಶ

ಬೆಂಗಳೂರು: ಹಿಜಾಬ್‌ ವಿವಾದಕ್ಕೆ ಹೈಕೋರ್ಟ್‌ ತ್ರಿಸದಸ್ಯ ಪೀಠ ಮೌಖಿಕ ಆದೇಶವನ್ನು(Oral order) ನೀಡಿದೆ. ಹಿಜಾಬ್‌ ಸಂಬಂಧ ಅರ್ಜಿ ವಿಚಾರಣೆ ಮುಗಿಯುವವರರೆಗೂ ಧಾರ್ಮಿಕ ಗುರುತು ಬಳಸದಂತೆ ಹೈಕೋರ್ಟ್‌ ಸೂಚನೆ ನೀಡಿದೆ.
ಹೈಕೋರ್ಟ್ ವಿಸ್ತೃತ ಪೀಠದಲ್ಲಿ ಹಿಜಾಬ್‌ ಅರ್ಜಿ ವಿಚಾರಣೆ ನಡೆದ ಬಳಿಕ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಈಗ ಮೌಖಿಕ ಆದೇಶವನ್ನು ನೀಡ ಬಯಸುತ್ತೇನೆ. ಈ ಅರ್ಜಿ ವಿಚಾರಣೆ ನಡೆಯುವವರೆಗೂ ಯಾವುದೇ ಧಾರ್ಮಿಕ ಗುರುತು ಬಳಸದಂತೆ ಸೂಚನೆ ನೀಡಿದ್ರು. ಅಂದರೆ ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್‌ ಆಗಲಿ, ಕೇಸರಿ ಶಾಲು ಆಗಲಿ ಧರಿಸಿ ಬರುವಂತಿಲ್ಲ ಎಂದು ಹೈಕೋರ್ಟ್‌ ವಿಸ್ತೃತ ಪೀಠ ಸೂಚನೆ ನೀಡಿದೆ. ಸರ್ಕಾರ ತೀರ್ಮಾನಿಸಿದ ಸಮವಸ್ತ್ರ ಧರಿಸಲು ಕೋರ್ಟ್‌ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

ನ್ಯಾಯಾಲಯದಲ್ಲಿ ನಡೆದ ವಾದ/ಪ್ರತಿವಾದ ಮಾಹಿತಿ

ಸಂಜಯ್‌ ಹೆಗ್ಡೆ:
ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಇಚ್ಛಾನುಸಾರ ಬಟ್ಟೆ ತೊಡಲು ಅವಕಾಶವಿದೆ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸಲು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶ ನೀಡಿಲ್ಲ. ಬಟ್ಟೆ ಧರಿಸುವುದು ಸಂವಿಧಾನದ 19(1)ಎ ಅಡಿ ಬರುತ್ತದೆ. ಬಟ್ಟೆ ಧರಿಸುವುದು ಸಾಂವಿಧಾನಿಕ ಹಕ್ಕು. ದಿವ್ಯಾ ಯಾದವ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನಿರ್ಧಾರ ಮಾಡಿದೆ. ಸರ್ಕಾರದ ಅಂಗಸಂಸ್ಥೆಗಳು ಸರ್ಕಾರಕ್ಕೆ ಪೂರಕವಾಗಿರಬೇಕು. ಸಂವಿಧಾನ ನೀಡಿರುವ ಸ್ವಾತಂತ್ರ್ಯವನ್ನು ರಕ್ಷಿಸುವ ಕೆಲಸ ಆಗಬೇಕು. ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನ ಗುರುತಿಸಿದೆ. ವೈಯಕ್ತಿಕ ನಂಬಿಕೆಗಳು ಖಾಸಗಿ ಹಕ್ಕಿನಲ್ಲಿ ಬರುತ್ತವೆ. ಉದ್ದ ಕೂದಲು, ಟರ್ಬನ್‌ ಕೂಡ ವೈಯಕ್ತಿಕ ಹಕ್ಕು.

ದೇವದತ್‌ ಕಾಮತ್:‌
ಸಂಜ್‌ ಹೆಗ್ಡೆ ವಾದವನ್ನು ವಾದವನ್ನು ನಾನು ಅನುಮೋದನೆ ನೀಡ್ತೇನೆ. ಏನಾದರೂ ಪರಿಹಾರ ಕಂಡುಕೊಳ್ಳಬೇಕು. 15/20ನಿಮಿಷ ಸಮಯ ಕೊಡಿ ಸರ್ಕಾರದ ಆದೇಶ ಕಾನೂನು ಬಾಹಿರ ಎಂದು ನಾನು ನಿರೂಪಿಸುತ್ತೇನೆ. ಸಮವಸ್ತ್ರದ ಬಣ್ಣದ ಹಿಜಾಬ್‌ ಧರಿಸಲು ಅವಕಾಶ ನೀಡಿ. ಸರ್ಕಾರದ ಸಮವಸ್ತ್ರ ಆದೇಶ ವಿವೇಚನಾ ರಹಿತವಾಗಿದೆ. ಫೆ.3ರಿಂದ ಈ ಆದೇಶ ನೀಡಿದ್ದಾರೆ. 2ವರ್ಷಗಳಿಂದ ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗ್ತಿದಾರೆ. ಸರ್ಕಾರ ಉಲ್ಲೇಖಿಸಿರುವ ಮೂರು ತೀರ್ಪುಗಳು ವಿರುದ್ಧವಾಗಿವೆ. ಕಾನೂನಿನ ನಿರ್ಧಾರಕ್ಕೆ ಸರ್ಕಾರ ವಿರುದ್ಧವಾಗಿ ನಡೆದುಕೊಂಡಿದೆ. ಸರ್ಕಾರದ ಆದೇಶದ ತಳಪಾಯವೇ ಸಡಿಲವಾಗಿದೆ. ತಳಪಾಯ ಹೋದರೆ ಇಡೀ ಆದೇಶವೇ ಹೋಗುತ್ತದೆ. ಖಾಸಗಿ ಶಾಲೆಗೂ ಅದರದ್ದೇ ಆದ ಮೂಲಭೂತ ಹಕ್ಕಿದೆ. ಸಂವಿದಾನದ 30ನೇವಿಧಿಯಲ್ಲಿ ಅಲ್ಪಸಂಖ್ಯಾತ ಹಕ್ಕಿದೆ. ವೈಯಕ್ತಿಕ ಹಕ್ಕು, ಶಾಲೆಯ ಹಕ್ಕಿನ ನಡುವೆ ಸ್ಪರ್ಧೆಯಿತ್ತು. ಕೇರಳ ಹೈಕೋರ್ಟ್‌ 2016ರ ತೀರ್ಪಿನ ಉಲ್ಲೇಖಿಸಿದ ವಕೀಲರು..ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗವೆಂದು ಹೇಳಿದೆ. ಖುರಾಸ್‌, ಹದೀಸ್‌ ಉಲ್ಲೇಖಿಸಿ ತೀರ್ಪು ನೀಡಿದೆ. ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ಮಾತ್ರ ಸರ್ಕಾರ ಉಲ್ಲೇಖ ಮಾಡಿದೆ. ಪತಿ, ತಂದೆ, ತಾಯಿ, ಮಕ್ಕಳ ಮುಂದೆ ಮಾತ್ರ ಹಿಜಾಬ್‌ಗೆ ವಿನಾಯ್ತಿ ನೀಡಿದೆ. ನಿರ್ದಿಷ್ಟ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದವರ ಮುಂದೆ ಹಿಜಾಬ್‌ ಕಡ್ಡಾಯ ಎನ್ನಲಾಗಿದೆ.

ಕಾಳೀಶ್ವರಂ ರಾಜ್:‌
ಮಧ್ಯಂತರ ಆದೇಶಕ್ಕೆ ಒತ್ತಾಯಿಸಿದ ವಕೀಲ ಕಾಳೀಶ್ವರಂ ರಾಜ್‌ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅವಕಾಶ ನೀಡಿ.ಸರ್ಕಾರ ಪರಿಸ್ಥಿತಿ ಅರ್ಥಮಾಡಿಕೊಂಡು ಅವಕಾಶ ನೀಡಬೇಕು.. ಹಿಜಾಬ್‌ನೊಂದಿಗೆ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಬೇಕು. ಕೃಪಾಣ್‌ ಧರಿಸಲು ಸಿಖ್ಖರಿಗೆ ಅವಕಾಶ ನೀಡಲಾಗಿದೆ. ಕಾಳೀಶ್ವರಂ ವಾದಕ್ಕೆ ಎಜಿ ಆಕ್ಷೇಪ

ಸಿಜೆ ಅಭಿಪ್ರಾಯ
ಹಿಜಾಬ್‌ನ ದೊಡ್ಡ ಪ್ರಶ್ನೆ ನಂತರ ನಿರ್ಧರಿಸಬಹುದು ಈಗ ಶಾಲೆಗೆ ತೆರಳುವ ಪ್ರಶ್ನೆ ನಿರ್ಧರಿಸಬಹುದು. ಸಂವಿಧಾನದ ಪ್ರಶ್ನೆ ಇರುವುದರಿಂದ ವಿಸ್ತೃತ ಪೀಠ ರಚನೆಯಾಗಿದೆ. ಹೀಗಾಗಿ ಸಂವಿಧಾನದ ಪ್ರಶ್ನೆಗಳನ್ನು ನಿರ್ಧರಿಸಬೇಕಿದೆ ಎಂದು ಸಿಜೆ ಅಭಿಪ್ರಾಯ ವ್ಯಕ್ತಪಡಿಸಿದ್ರು.

Share Post