Politics

ನನಗೆ ಇಡಿ, ಸಿಬಿಐ ಭಯವಿಲ್ಲ; ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಡೆಹ್ರಾಡೂನ್: ಪ್ರಧಾನಿ ಮೋದಿಯವರು ಇಡಿ, ಸಿಬಿಐ ಮೂಲಕ ಎಲ್ಲರನ್ನೂ ಹೆದರಿಸಬಹುದು ಎಂದು ಭಾವಿಸುತ್ತಾರೆ. ಆದರೆ ನನಗೆ ಅವುಗಳ ಭಯವಿಲ್ಲ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್‌ ಗಾಂಧಿ ನನ್ನ ಮಾತನ್ನು ಕೇಳುವುದಿಲ್ಲ ಎಂದು ಹೇಳಿರೋದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಮಧಿ ಪ್ರತಿಕ್ರಿಯಿಸಿದ್ದಾರೆ.

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಖಾಸಗಿ ಸುದ್ದಿ ಸಂಸ್ಥೆ ಮೋದಿ ನೀಡಿದ ಸಂದರ್ಶನದಲ್ಲಿ ರಾಹುಲ್‌ ಗಾಂಧಿ ಮಾತು ಕೇಳುವುದಿಲ್ಲ, ಜೊತೆಗೆ ಸದನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ. ಹೌದು ನಾನೇಕೆ ಅವರ ಮಾತನ್ನು ಕೇಳಬೇಕು ಎಂದು ರರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

Share Post