ಲಿಖಿಂಪುರ ಖೇರಿ ಹಿಂಸಾಚಾರ ಪ್ರಕರಣ; ಕೇಂದ್ರ ಸಚಿವರ ಪುತ್ರನಿಗೆ ಜಾಮೀನು ಮಂಜೂರು
ಅಲಹಾಬಾದ್: ಉತ್ತರ ಪ್ರದೇಶದ ಲಿಖಿಂಪುರ ಕೇರಿಯಲ್ಲಿ ರೈತರ ಹೋರಾಟದ ವೇಳೆ, ಪ್ರತಿಭಟನಾಕಾರರ ಮೇಲೆ ಜೀಪ್ ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಪುತ್ರನಿಗೆ ಜಾಮೀನು ಸಿಕ್ಕಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನೀಡಿ ಇಂದು ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.
2021ರ ಅಕ್ಟೋವರ್ 3ರಂದು ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೇಂದ್ರ ಸಚಿವ ಆಶಿಶ್ ಮಿಶ್ರಾ ಅವರಿದ್ದ ವಾಹನ ರೈತ ಮೇಲೆ ಚಲಿಸಿತ್ತು. ಈ ವೇಳೆ ನಾಲ್ವರು ಪ್ರತಿಭಟನಾಕಾರರು ಸೇರಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ನಾಲ್ಕು ಕೇಸ್ ದಾಖಲಾಗಿತ್ತು.