Bengaluru

ತ್ರಿಸದಸ್ಯ ಪೀಠದಲ್ಲಿ ಹಿಜಾಬ್ ಅರ್ಜಿ ವಿಚಾರಣೆ: ವಕೀಲರ ವಾದ/ಪ್ರತಿವಾದ

ಬೆಂಗಳೂರು: ಮೂವರು ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಹಿಜಾಬ್‌ ಅರ್ಜಿ ವಿಚಾರಣೆ ನಡೆಯುತ್ತಿದ್ದು, ವಕೀಲರು ತಮ್ಮ ವಾದ ಮತ್ತು ಪ್ರತಿವಾದಗಳನ್ನು ಮಂಡಿಸಿದ್ದಾರೆ ಅದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ..

ಸಂಜಯ್‌ ಹೆಗ್ಡೆ:
ಹಿಜಾಬ್‌ ಧರಿಸುವುದು ಮುಸ್ಲಿಂ ಮಹಿಳೆಯರ ಹಕ್ಕು, ಉಡುಪಿಯ ಆಯಿಷಾ ಕೇಸ್‌ನಲ್ಲಿ ಸಂವಿಧಾನದ ಪ್ರಶ್ನೆಗಳನ್ನು ಹೈಕೋರ್ಟ್‌ ನಿರ್ಧರಿಸಬೇಕಿದೆ. ಮೊದಲು ಈ ಪ್ರಶ್ನೆಗಳು ಯಾವುದೆಂದು ತಿಳಿಸಿ, ಪ್ರಕರಣದ ಹಿನ್ನೆಲೆ ತಿಳಿಸಿ ವಾದ ಮಂಡನೆ ಆರಂಭಿಸಿ ಎಂದ ನ್ಯಾಯಮೂರ್ತಿಗಳು. ನನ್ನ ಸ್ಥಳ ಉಡುಪಿಯಲ್ಲಿ ಘಟನೆ ನಡೆದಿದೆ. ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅದಕ್ಕೆ ಕಾಲೇಜು ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿ, ಒಳಗೆ ಬಿಡದೆ ಗೇಟ್‌ ಬಳಿ ಕಾಯಿಸಿ ಹಾಜರಾತಿ ನೀಡದೆ ವಿದ್ಯಾರ್ಥಿಗಳಿಗೆ ನೋವುಂಟು ಮಾಡಿದ್ದಾರೆ. ಡಿಸೆಂಬರ್ 2021ರಲ್ಲಿ ಘಟನೆ ನಡೆದಿತ್ತು. ಗಟನೆ ಬಳಿಕ ಶಾಲಾ ಅಭಿವೃದ್ದಿ ಸಮಿತಿಗೆ ವಿದ್ಯಾರ್ಥಿನಿಯರು ದೂರು ಸಲ್ಲಿಸಿದ್ರು. ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರ ಸಂಬಂಧ ನಿಯಮವಿಲ್ಲ ಎಂದಾಗ, ಹಾಘಾದ್ರೆ ಸಮವಸ್ತ್ರ ಧರಿಸುವ ಅಗತ್ಯ ಇಲ್ಲವೇ.. ನಮಗೆ ಅರ್ಥವಾಯಿತು ಈಗ ಕಾನೂನಿನ ವಾದ ಹೇಳಿ ಎಂದು ಸಿಜೆ ಸೂಚನೆ ನೀಡಿದ್ರು. ಹೃದಯ ವೈಶಾಲ್ಯತೆ ಇಲ್ಲದೆ ಈ ದೇಶದ ಬೆಳವಣಿಗೆ ಸಾಧ್ಯವಿಲ್ಲ. ಶಾಲೆಗಳಲ್ಲಿ ಮೊದಲು ಸಮವಸ್ತ್ರ ಎಂಬುದು ಇರಲಿಲ್ಲ. ತಮಿಳುನಾಡಿನಲ್ಲಿ ಮೊದಲು ಶುರುವಾಗಿದ್ದು, 1995ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಜಾರಿಯಾಯಿತು. ಶಾಲಾ ಪಠ್ಯಕ್ರಮ ಸಂಬಂಧ ಈ ನಿಯಮಗಳನ್ನು ಮಾಡಲಾಯಿತು. 5ವರ್ಷಗಳಿಗೊಮ್ಮೆ ಸಮವಸ್ತ್ರ ಬದಲಾಗಬೇಕು. ಇಚ್ಛೆ ಬಂದ ಕಡೆ ಸಮವಸ್ತ್ರ ಹೊಲಿಸಿಕೊಳ್ಳಲು ಅವಕಾಶ ಕಾಯ್ದೆಯಲ್ಲಿ ಸಮವಸ್ತ್ರ ಸಂಬಂಧ ಕೆಲ ನಿಯಮಗಳಿವೆ. ಪಿಯು ಕಾಲೇಜಿಗೆ ಸಮವಸ್ತ್ರ ನಿಯಮಗಳಿಲ್ಲ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸುವಂತಿಲ್ಲ. ಸೆಕ್ಷನ್‌113 ನಿಯಮಾವಳಿ ಉಲ್ಲೇಖಸಿದ ವಕೀಲರು. ಈ ಬಗ್ಗೆ ವಾದ ಮಂಡನೆಗೆ ತುಂಬಾ ಸಮಯ ಬೇಕು. ರಾಜ್‌ಕುಮಾರ್‌ ಕಿಡ್ನ್ಯಾಪ್‌ ಆದಾಗ ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಏನಾದ್ರೂ ಮಾಡದಿದ್ರೆ ಸಮಸ್ಯೆ ಆಗುತ್ತೆ ಎಂದು ವಾದ ಮಾಡಲಾಗಿತ್ತು. ನ್ಯಾ.ಭರೂಚ ಮುಂದೆ ಸರ್ಕಾರದ ಪರವಾಗಿ ವಾದ ಮಾಡಲಾಗಿತ್ತು. ವಿದ್ಯಾರ್ಥಿಗಳು ಯೂನಿಫಾರ್ಮ್‌ಗೆ ಬದ್ಧರಾಗಿರುತ್ತಾರೆ. ಹಿಜಾಬ್‌ಗೆ ಯಾರೂ ಆಕ್ಷೇಪ ಮಾಡಬಾರದು. ವಿದ್ಯಾರ್ಥಿನಿಯರು ಶಾಲೆಗೆ ಹೇಗೆ ಹೋಗಬೇಕು ಎಂದು ಸ್ಪಷ್ಟನೆ ನೀಡಿ ಎಂದ ಹೆಗ್ಡೆ

ದೇವದತ್‌ ಕಾಮತ್:‌
ಸಂಜಯ್‌ ಹೆಗ್ಡೆ ಅರ್ಜಿಯಲ್ಲಿ ಸರ್ಕಾರಿ ಆದೇಶ ಪ್ರಶ್ನಿಸಿಲ್ಲ. ನಾವು ನಮ್ಮ ಅರ್ಜಿಯಲ್ಲಿ ಸರ್ಕಾರಿ ಆದೇಶವನ್ನು ಪ್ರಶ್ನಿಸಿದ್ದೇವೆ ಹಾಗಾಗಿ ನಮಗೆ ವಾದ ಮಂಡನೆಗೆ ಅವಕಾಶ ಕೊಡಿ ಎಂದು ಕಾಮತ್‌ ಮನವಿ. ಎಲ್ಲರ ವಾದವನ್ನು ಕೇಳುತ್ತೇವೆ ಒಬ್ಬೊಬ್ಬರಾಗಿಯೇ ಮುಗಿಸಲಿ ಎಂದ ಸಿಜೆ ಮಾರ್ಚ್‌ನಲ್ಲಿ ಪರೀಕ್ಷೆಗಳು ನಡೆಯಲಿವೆ ಹೀಗಾಗಿ ಮಧ್ಯಂತರ ತೀರ್ಪು ನೀಡುವಂತೆ ದೇವದತ್‌ ಕಾಮತ್‌ ಮನವಿ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸುತ್ತಾರೆ. ಇದು ಯೂನಿಫಾರ್ಮ್‌ ವಿಚಾರ ಅಲ್ಲ..ಆದ್ರೆ ಸರ್ಕಾರ ಹಿಜಾಬ್‌ ಧರಿಸಬಾರದು ಎಂದಿದೆ. ಸರ್ಕಾರ ಬೆಂಕಿ ಹೊತೆ ಆಟವಾಡ್ತಿದೆ. ಹಿಜಾಬ್‌ ಧಾರಣೆ ಅವರವರ ಸಂಪ್ರದಾಯ. ಹಿಜಾಬ್‌ನಿಂದ ಬೇರೆಯವರಿಗ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳನ್ನು ಸಿಡಿಸಿಗೆ ಒತ್ತೆಯಾಳಾಗಿ ಮಾಡ್ತಿದೆ ಸರ್ಕಾರದ ಆದೇಶದಲ್ಲಿ ಹಿಜಾಬ್‌ ಹಕ್ಕಲ್ಲ ಎಂದು ಉಲ್ಲೇಖ ಮಾಡಿದೆ. ಸರ್ಕಾರದ ಆದೇಶದ ಕೊನೆಯ ಪ್ಯಾರಾ ಎಲ್ಲವನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಬಿಟ್ಟಿದೆ. ಕೇರಳ, ಬಾಂಬೆ, ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ಬಗ್ಗೆ ಉಲ್ಲೇಖ.

ಸಜ್ಜನ್‌ ಪೂವಯ್ಯ:
ಶಾಲಾ ಅಭಿವೃದ್ದಿ ಸಮಿತಿ ಪರ ಸಜ್ಜನ್‌ ಪೂವಯ್ಯ ವಾದ ಮಂಡನೆ. ಸಂಜಯ್‌ ಹೆಗ್ಡೆ ಸಲ್ಲಸಿರುವ ದಾಖಲೆ ಪತ್ರ ನಮಗೂ ಬೇಕು. ಇ-ಮೇಲ್‌ ಮೂಲಕ ದಾಖಲೆ ಪೂರೈಸಲು ಪೂವಯ್ಯ ಮನವಿ

ಪ್ರಭುಲಿಂಗ ನಾವದಗಿ:
ಅಂತಿಮ ತೀರ್ಪಿಗೆ ವಾದ ಕೇಳಲು ಪ್ರಭುಲಿಂಗ ನಾವದಗಿ ಮನವಿ. ಹಿಜಾಬ್‌ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದಾರೆ. ಇದರಿಂದ ಕಾಲೇಜುಗಳಲ್ಲಿ ಗಲಭೆ ಸೃಷ್ಟಿಯಾಗುತ್ತಿವೆ. ನಾಳೆವರೆಗೂ ಶಾಲೆ-ಕಾಲೇಜು ರಜೆ ನೀಡಲಾಗಿದೆ. ನಾವು ಕಾಲೇಜುಗಳನ್ನು ಆರಂಭಿಸಲು ಸಿದ್ಧರಿದ್ದೇವೆ. ಆದರೆ ಕೇಸರಿ ಶಾಳು ಮತ್ತು ಹಿಜಾಬ್‌ಗೆ ಒತ್ತಾಯ ಕೇಳಿ ಬರುತ್ತಿದೆ. ಹೀಗಿರುವಾಗ ಶಾಲೆ ಆರಂಭ ಕಷ್ಟವಾಗುತ್ತದೆ. ಶಾಲಾ ಅಭಿವೃದ್ಧಿ ಸಮಿತಿ ವಸ್ತ್ರಸಂಹಿತೆಯ ಪರವಾಗಿರಬೇಕು. ವಿವಾದ ಸಂಬಂಧ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ವಿದ್ಯೆಯಿಂದ ವಂಚಿತರಾಗಬಾರದು.

Share Post