ಮತೀಯ ಗಲಭೆಗೆ ಪ್ರೋತ್ಸಾಹ ಕೊಟ್ಟ ಯಾರನ್ನೂ ಬಿಡುವುದಿಲ್ಲ-ಗೃಹ ಸಚಿವ
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಘಟನೆಗೆ ಸಂಬಂಧಿಸಿದಂತೆ ನ್ಯೂಸ್ ಎಕ್ಸ್ ಕನ್ನಡಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ದುರದೃಷ್ಟಕರ ಸಂಗತಿ. ನಾವು ಪರಿಸ್ಥಿತಿಯನ್ನ ತಿಳಿಗೊಳಿಸುವ ಪ್ರಯತ್ನ ಮಾಡ್ತಿದ್ದೇವೆ. ಈಗಾಗಲೇ ಹಲವು ಕ್ರಮಗಳನ್ನು ಕೂಡ ಕೈಗೊಂಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲದಿಂದ ತೀರ್ಪು ಬರುವವರೆಗೂ ನಾವು ಕಾಯಬೇಕು.
ಈ ಬಗ್ಗೆ ನಮ್ಮ ಹಲವು ನ್ಯಾಯಾಲಯಗಳು ಪ್ರಕರಣದ ಬಗ್ಗೆ ತೀರ್ಪು ನೀಡಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಅಧಿಸೂಚನೆಯನ್ನು ವಿಚಾರಣೆ ಮಾಡಿ, ಕಾಲೇಜುಗಳಲ್ಲಿ ಸಮಾನತೆ ಕಾಪಾಡಲು ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಬೇಕೆಂದು ಮನವಿ ಮಾಡಿಕೊಳ್ತಿದೇನೆ. ಕಾಲೇಜುಗಳಿಗೆ ರಕ್ಷಣೆ ನೀಡುವಂತಹ ಕೆಲಸವನ್ನು ನಮ್ಮ ಪೊಲೀಸರು ಮಾಡಿದ್ದಾರೆ. ಮಕ್ಕಳು ಗಲಭೆ ಮಾಡೋದಕ್ಕೆ ಕೆಲವು ಮತೀಯ ಸಂಘಟನೆಗಳು ಕಾರಣ ಇದರ ಹಿಂದಿರುವ ಯಾರನ್ನೂ ಬಿಡುವುದಿಲ್ಲ. ಈಗಾಗಲೇ ನಮ್ಮ ಪೊಲೀಸರಿಗೆ ಸೂಚನೆ ನೀಡಿದ್ದೀನೆ. ಘಟನೆಗೆ ಕುಮ್ಮಕ್ಕು ನೀಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಹೆಣ್ಣುಮಕ್ಕಳ ರಕ್ಷಣೆ ನಮ್ಮ ಸರ್ಕಾರದ ಹೊಣೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಣ್ಣುಮಕ್ಕಳಿಗೆ ಗೌರವ ನೀಡುತ್ತದೆ. ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತೇವೆ ಎಂದಿದ್ದಾರೆ.