ಭಾರತದ ವಿಚಾರದಲ್ಲಿ ಮೂಗು ತೂರಿಸಬೇಡಿ, ನಿಮ್ಮ ಸ್ವಂತ ದೇಶವನ್ನು ನೋಡಿಕೊಳ್ಳಿ-ಒವೈಸಿ ವಾರ್ನಿಂಗ್
ಉತ್ತರಪ್ರದೇಶ: ರಾಜ್ಯದ ಹಿಜಾಬ್(Hijab) ವಿವಾದದ ಕಿಚ್ಚು ಹೊತ್ತು ಉರಿಯುತ್ತಿದೆ. ಇದೀಗ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಭಾರತದ ದಾಯಾದಿ ರಾಷ್ಟ್ರ ಪಾಕಿಸ್ತಾನದವರೆಗೂ(Pakistan) ಹೋಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಪಾಕಿಸ್ತಾನ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಬುರ್ಖಾ(Khureshi) ನಿಷೇಧ ಅಂದ್ರೆ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಂತೆ, ವಿಶೇಷವಾಗಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ ಕಸಿದಂತೆ ಎಂದು ವ್ಯಾಖ್ಯಾನ ನೀಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಬೇಡಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಹುಸೇನ್(Phavad hussen) ಕೂಡ ಕರ್ನಾಟಕದಲ್ಲಿ ಹಿಬಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿ “ಅಸ್ಥಿರ ನಾಯಕತ್ವದಲ್ಲಿ ಭಾರತೀಯ ಸಮಾಜವು ಅತ್ಯಂತ ವೇಗವಾಗಿ ಕುಸಿಯುತ್ತಿದೆ” ಸದ್ಯ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಭಯ ಹುಟ್ಟಿಸುವಂತಿವೆ ಎಂದು ಹುಸೇನ್ ಎಂದು ಟ್ವೀಟ್ ಮಾಡಿದ್ದಾರೆ.
ಪಾಕ್ ಸಚಿವರ ಹೇಳಿಕೆಗೆ ಎಂಐಎಂ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ(OYC) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ವಿಚಾರ ನಮ್ಮ ಸಮಸ್ಯೆ, ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಇದು ನಮ್ಮ ಆಂತರಿಕ ವಿಚಾರ ಇದರಲ್ಲಿ ನೀವು ಮೂಗು ತೂರಿಸಬೇಡಿ ಎಂದು ವಾರ್ನ್ ಮಾಡಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿನ ಬಗ್ಗೆ ನಮಗೆ ನೀತಿಪಾಠ ಹೇಳುತ್ತಿರುವುದು ನೀವಾ, ನಿಮ್ಮಿಂದ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನಾವು ತಿಳಿದುಕೊಳ್ಳಬೇಕಾ..? ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ ಮಲಾಲಾ ಯೂಸುಫ್ ಅವರ ಮೇಲೆ ಪಾಕಿಸ್ತಾನದಲ್ಲಿ ದಾಳಿ ನಡೆಸಿದ್ದು ನಮಗೆಲ್ಲ ಗೊತ್ತೆ ಇದೆ. ಪಾಕಿಸ್ತಾನದಲ್ಲಿ ನಡೆದ ದಾಳಿಯಿಂದಾಗಿ ಮಲಾಲಾ ಯೂಸುಫ್‌ಜಾಯ್ ದೇಶವನ್ನು ತೊರೆಯಬೇಕಾಯಿತು ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಭಾರತದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುವ ಮೊದಲು ನಿಮ್ಮ ದೇಶದ ಸಮಸ್ಯೆಗಳ ಬಗ್ಗೆ ಯೋಚಿಸಿ.. ಮೊದಲು ನಿಮ್ಮ ಸ್ವಂತ ಮನೆಯ ಸಮಸ್ಯೆಗಳನ್ನು ಸರಿಪಡಿಸಿ.. ನಿಮ್ಮ ದೇಶದಲ್ಲಿ ನಿಮಗೆ ಸಾಕಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳತ್ತ ಗಮನ ಹರಿಸಿ.. ಆ ಸಮಸ್ಯೆಗಳನ್ನು ಪರಿಹರಿಸಲು ನೋಡಿ. ಭಾರತ ನಮ್ಮ ದೇಶ, ಅದು ನಮ್ಮ ಆಂತರಿಕ ವಿಚಾರ. ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸಮಸ್ಯೆಗಳ ಬಗ್ಗೆ ಯೋಚಿಸಿ ಎಂದು ಪಾಕಿಸ್ತಾನಕ್ಕೆ ಓವೈಸಿಗೆ ಕಟುವಾದ ಕೌಂಟರ್ ನೀಡಿದ್ದಾರೆ.
ಪಾಕಿಸ್ತಾನದ ಸಂವಿಧಾನವು ಮುಸ್ಲಿಮೇತರರಿಗೆ ಪ್ರಧಾನಿಯಾಗಲು ಅವಕಾಶ ನೀಡುವುದಿಲ್ಲ. ಪಾಕಿಸ್ತಾನಕ್ಕೆ ನನ್ನ ಸಲಹೆ ಏನೆಂದರೆ, “ಇದರ್ ಮತ್ ದೇಖೋ ಉದರ್ ಹೈ ದೇಖೋ (ಈ ಕಡೆ ನೋಡಬೇಡಿ, ನಿಮ್ಮ ಸ್ವಂತ ದೇಶವನ್ನು ನೋಡಿ)” ಎಂದು ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಓವೈಸಿ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ಹಿಜಾಬ್ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕು ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ. ಆ ಹಕ್ಕಿನ ರಕ್ಷಣೆಗಾಗಿ ಹೋರಾಟ ಮಾಡೇ ಮಾಡುತ್ತೇವೆ ಎಂದು ಓವೈಸಿ ಪುನರುಚ್ಚರಿಸಿದರು. ಹಿಜಾಬ್ ವಿರುದ್ಧ ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆ ಅಸಂವಿಧಾನಿಕ ಎಂದು ಟೀಕೆ ಮಾಡಿದ್ದಾರೆ.