ಪೆರುವಿನಲ್ಲಿ ವಿಮಾನ ದುರಂತ, ಏಳು ಮಂದಿ ಸಾವು
ದಕ್ಷಿಣ ಅಮೆರಿಕಾ: ಭೀಕರ ವಿಮಾನ ಅಪಗಾತದಲ್ಲಿ ಏಳು ಮಂದಿ ಸಾವನ್ನಪ್ಪಿದ ಘಟನೆ ದಿಕ್ಷಿಣ ಅಮೆರಿಕಾದ ಪೆರುವಿನಲ್ಲಿ ನಡೆದಿದೆ. ಪೆರುವಿನಲ್ಲಿರುವ ಮರುಭೂಮಿಯ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಹೊರಟಿದ್ದ ವಿಮಾನವು ನಜ್ಕಾದಲ್ಲಿ ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಐವರು ಪ್ರವಾಸಿಗರು, ಪೈಲಟ್ ಮತ್ತು ಸಹ ಪೈಲಟ್ ಕೂಡ ಇದ್ದಾರೆ. ಪ್ರವಾಸಿಗರಲ್ಲಿ ಮೂವರು ಡಚ್ ಪ್ರವಾಸಿಗರು ಮತ್ತು ಇಬ್ಬರು ಚಿಲಿಯನ್ನರು ಇದ್ದುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪೆರುವಿಯನ್ ಮರುಭೂಮಿಯಲ್ಲಿನ ನಾಜ್ಕಾ ಲೈನ್‌ಗಳ ಪ್ರವಾಸಕ್ಕೆ ಸಂದರ್ಶಕರನ್ನು ಕರೆದೊಯ್ಯುತ್ತಿದ್ದಾಗ, ಸೆನ್ನಾ 207, ವಿಮಾನ ನಜ್ಕಾದಲ್ಲಿನ ವಾಯುಯಾನ ಕೇಂದ್ರದ ಬಳಿ ಅಪಘಾತಕ್ಕೀಡಾಯಿತು. ಇದು ಏರೋ ಸ್ಯಾಂಟೋಸ್ ಎಂಬ ಪ್ರವಾಸೋದ್ಯಮ ಕಂಪನಿಗೆ ಸೇರಿದ ವಿಮಾನ ಎಂದು ಗುರುತಿಸಲಾಗಿದೆ.
ಪೆರುವಿನಲ್ಲಿರುವ ನಾಜ್ಕಾ ಲೈನ್ಸ್ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನಾಜ್ಕಾ ರೇಖೆಗಳು 1,500-2,000 ವರ್ಷಗಳ ಹಿಂದೆ ಕರಾವಳಿ ಮರುಭೂಮಿಯ ಮೇಲ್ಮೈಯಲ್ಲಿ ಕಾಲ್ಪನಿಕ ವ್ಯಕ್ತಿಗಳು, ಜೀವಿಗಳು ಮತ್ತು ಸಸ್ಯಗಳ ಚಿತ್ರಣಗಳಿದ್ದು, ಇದು UNESCO ವಿಶ್ವ ಪರಂಪರೆಯ ತಾಣವಾಗಿದೆ.
ವಿದೇಶಿ ಪ್ರವಾಸಿಗರಿಗಾಗಿ ಮಾರಿಯಾ ರಿಚೆ ಏರ್‌ಫೀಲ್ಡ್‌ನಿಂದ ಪ್ರತಿದಿನ ಹತ್ತಾರು ವಿಮಾನಗಳು ಕಾರ್ಯನಿರ್ವಹಿಸುತ್ತವೆ. ಅಕ್ಟೋಬರ್ 2010 ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಾಲ್ಕು ಬ್ರಿಟಿಷ್ ಪ್ರವಾಸಿಗರು ಮತ್ತು ಇಬ್ಬರು ಪೆರುವಿಯನ್ ಫ್ಲೈಟ್ ಅಟೆಂಡೆಂಟ್‌ಗಳು ಸಾವನ್ನಪ್ಪಿದರು ಎನ್ನಲಾಗಿದೆ.