ಸಾಂಸ್ಕೃತಿಕ ನಗರಿಯಲ್ಲೂ ಹಿಜಾಬ್ ಸದ್ದು
ಮೈಸೂರು: ಉಡುಪಿ, ಕುಂದಾರಪುರದಲ್ಲಿ ಶುರುವಾದ ಹಿಜಾಬ್ ವಿವಾದ ಈಗ ಸಾಂಸ್ಕೃತಿಕ ನಗರಿ ಮೈಸೂರಿಗೂ ಕಾಲಿಟ್ಟಿದೆ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗಿದ್ದಾರೆ. ಈ ಮೂಲಕ ವಿದ್ಯಾರ್ಥಿನಿಯರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಕರಾವಳಿಯಲ್ಲಿ ಹಿಜಾಬ್ ವಿವಾದ ಹೆಚ್ಚಾಗುತ್ತಿದ್ದಂತೆ, ಮೈಸೂರಿನಲ್ಲೂ ಇದೇ ವಿವಾದ ಸದ್ದು ಮಾಡಲು ಶುರು ಮಾಡಿದೆ. ಬನ್ನಿಮಂಟಪದ ಹೈವೆ ಸರ್ಕಲ್ ಬಳಿ ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ, ಐ ಲವ್ ಹಿಜಾಬ್ ಎಂಬ ಪ್ಲೇಕಾರ್ಡ್ ಪ್ರದರ್ಶಿಸಿದರು. ಕಾಲೇಜಿನಲ್ಲೂ ಹಿಜಾಬ್ ಗೆ ಅವಕಾಶ ಕಲ್ಪಿಸುವಂತೆ ಘೋಷಣೆ ಕೂಗಿದ್ದಾರೆ.
ಸೈಂಟ್ ಫಿಲೋಮಿನಾ ಕಾಲೇಜು ಸೇರಿದಂತೆ ಹಲವು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಬನ್ನಿಮಂಟಪದಲ್ಲಿ ಸೇರಿ ತರುವಾಯ ಅಲ್ಲಿ ಹಿಜಾಬ್ ಧರಿಸಿ ಕಾಲೇಜಿನತ್ತ ಹೊರಟರು.