Bengaluru

ಇಬ್ರಾಹಿಂ ಎಲ್ಲೇ ಹೋದರೂ ಆತ ನನ್ನ ಸ್ನೇಹಿತ; ಸಿದ್ದರಾಮಯ್ಯ

ಬೆಂಗಳೂರು: ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್‌ ಪಕ್ಷ ಬಿಡುತ್ತಿರುವುದರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅವನು ನನ್ನ ಸ್ನೇಹಿತ. ಅವನು ಎಲ್ಲೇ ಇದ್ದರೂ ನಾನು ಅವನ ಮನೆಗೆ ಹೋಗುತ್ತೇನೆ ಎಂದು ಸಿದ್ದರಾಮಯಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಬ್ರಾಹಿಂ ನಾನು ಮೊದಲಿನಿಂದ ಸ್ನೇಹಿತರು. ಅವನು ನನ್ನನ್ನು ಊಟಕ್ಕೆ ಕರೆಯುತ್ತಿರುತ್ತಾನೆ. ಅವನು ಒಂದು ವೇಳೆ ಪಕ್ಷ ಬಿಟ್ಟುಹೋದರೂ ನಮ್ಮ ಸ್ನೇಹ ಮುಂದುವರೆಯುತ್ತದೆ. ನಾನು ಅವನ ಮನೆಗೆ ಹೋಗುತ್ತೇನೆ. ಅವನಿಗೆ ಈಗ ಕೋಪ ಇದೆ. ಕೋಪ ಕಡಿಮೆಯಾದ ಮೇಲೆ ಆತನ ಜೊತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share Post