ನೊಟೀಸ್ ವಿಚಾರಕ್ಕೆ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಶುರು
ಬೆಂಗಳೂರು: ಮತ್ತೊಂದು ಸುತ್ತಿನ ಸಮರಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣ ರೆಡಿಯಾಗಿದೆ. ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಪಿಸು ಪಿಸು ಮಾತಾಡಿದ್ದಕ್ಕೆ ಮಾಜಿ ಶಾಸಕ ಅಶೋಕ್ ಪಟ್ಟಣ್‌ಗೆ ನೀಟಿಸ್ ನೀಡಲಾಗಿದೆ. ನೋಟಿಸ್ ನೀಡಿದ್ದಕ್ಕೆ ಉದ್ದೇಶಪೂರ್ವಕವಾಗಿ ನೊಟೀಸ್ ನೀಡಿದ್ದಾರೆಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಬಣ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಶಾಸಕ ಅಶೋಕ್ ಪಟ್ಟಣ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ. ಅಶೋಕ್ ಜೊತೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ ಸಿದ್ದರಾಮಯ್ಯ ನೊಟೀಸ್‌ಗೆ ಸಮರ್ಪಕವಾಗಿ ಉತ್ತರ ನೀಡುವಂತೆ ಸಲಹೆ ಕೊಟ್ಟಿದ್ದಾರೆ.
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇದೇ ಮೊದಲೇನಲ್ಲ ಮೈಸೂರು ಮೇಯರ್ ಚುನಾಔಣೆಯಲ್ಲಿಯೂ ಕಿತ್ತಾಟ ನಡೆದಿತ್ತು. ಮೇಕೆದಾಟು ಪೂರ್ಭಾವಿ ಸಭೆಯಲ್ಲಿಯೂ ಎರಡೂ ಬಣಗಳ ನಡುವೆ ಮುಂದಿನ ಸಿಎಂ ವಿಚಾರವಾಗಿ ಜಗಳ ಮಾಡಿಕೊಂಡಿದ್ರು. ಅಶೋಕ್ ಸಿದ್ದರಾಮಯ್ಯ ಆಪ್ತ ಎಂದು ನೊಟೀಸ್ ನೀಡಿದ್ದಾರೆ. ಈ ಹಿಂದೆ ನಾಯಕರ ವಿರುದ್ಧವೇ ಮಾತನಾಡಿದ್ದರು. ಆತ ಅವರಿಗ್ಯಾಕೆ ನೊಟೀಸ್ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಷ್ಟೆ ಅಲ್ಲದೆ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ನೇಮಕ ಮಾಡಿದ್ದರಿಂದ ಸಿದ್ದರಾಮಯ್ಯ ಭಾರೀ ಅಪ್ ಸೆಟ್ ಆಗಿದ್ದಾರೆ. ತಮ್ಮ ಮಾತಿಗೆ ಹೈಕಮಾಂಡ್ ಮನ್ನಣೆ ನೀಡಿಲ್ಲವೆಂದು ಬೇಸರ ಕೂಡ ವ್ಯಕ್ತಪಡಿಸಿರುವುದಾಗಿ ಆಪ್ತ ವಲಯದಲ್ಲಿ ಮಾಹಿತಿ ಹರಿದಾಡ್ತಿದೆ.