ಕಿಬ್ಲಾದಲ್ಲಿ ದುರಂತ ಘಟನೆ: ಹೈ ಟೆನ್ಷನ್ ವೈರ್ ತಗುಲಿ 30 ಮಂದಿ ಸಾವು
ಕಾಂಗೋ: ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಮೂವತ್ತು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಂಗೋದ ಕಿಬ್ಲಾದಲ್ಲಿ ನಡೆದಿದೆ. ಈ ದುರಂತವನ್ನು ಅಲ್ಲಿನ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಂದಿನಂತೆ ತರಕಾರಿ ಮಾರುಕಟ್ಟೆಯಲ್ಲಿ ಖರೀದಿಗಾಗಿ ಜನಜಂಗುಳಿ ಸೇರಿತ್ತು. ಮೊದಲೇ ಕೆಸರು ಹಾಗೂ ಗಲೀಜಿನಿಂದ ಕೂಡಿದ್ದ ಮಾರುಕಟ್ಟೆಯಲ್ಲಿ ಹೈ ವೋಲ್ಟೇಜ್ ಲೈನ್ ಹೋಗಿತ್ತು. ಅಸ್ವಚ್ಛತೆಯಿಂದ ಕೂಡಿರುವ ಪ್ರದೇಶದಲ್ಲಿ ನೀರು ತುಂಬಿ ತುಳುಕಿದ್ದರಿಂದ ವಿದ್ಯುತ್ ಕಂಬಗಳೂ ಕೂಡ ಸಡಿಲಗೊಂಡಿದ್ದವು. ಈ ವೇಳೆ ವೈರ್ ಸಡಿಲಗೊಂಡು ಕೆಳಗೆ ಬಿದ್ದಿದೆ. ನೀರಿನ ಸೆಳೆತವಿರುವ ಕಡೆಯೆಲ್ಲಾ ವಿದ್ಯುತ್ ಪ್ರವಹಿಸಿದೆ. ಕರೆಂಟ್ ಪಾಸ್ ಆಗಿರುವ ಕಡೆ ಬಂದವರೆಲ್ಲರೂ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಕರೆಂಟ್ ಶಾಕ್ನಿಂದಾಗಿ ಮಾರುಕಟ್ಟೆಯಲ್ಲಾ ಹೆಣಗಳ ರಾಶಿ ಬಿದ್ದಿವೆ. ಕೆಸರಿನ ಮಡುವಿನಲ್ಲಿ ತೇಲುತ್ತಿರುವ ಹೆಣಗಳ ರಾಶಿ ನೋಡುದ್ರೆ ಮನಕಲುಕುವಂತಿದೆ. ವಿಡಿಯೋ ಶೇರ್ ಮಾಡಿರುವ ಪತ್ರಕರ್ತೆ ಚೆಲ್ಲಾಪಿಲ್ಲಿಯಾಗಿ ಬಿದ್ದರುವ ಹೆಣಗಳ ರಾಶಿ, ಕೆಸರಿನಲ್ಲಿ ಸಿಲುಕಿರುವ ವಿದ್ಯುತ್ ತಂತಿ, ಮಾರುಕಟ್ಟೆಯಲ್ಲಿ ಘಟನೆಯಿಂದ ಜನ ಭಯಭೀತರಾಗಿ ಗುಂಪು ಗುಂಪಾಗಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
#RDC:Drame de Matadi Kibala : le 1e min @LukondeSama s’est rendu sur place. Près de 30 personnes mortes par électrocut°. "Des mesures fortes seront envisagées pr que pareil cas n’arrive plus. Pensées pieuses pr les victimes". Ds sa suite @PatrickMuyaya , @NgobilaM et Gen Kasongo pic.twitter.com/zlXK8Rp1gV
— Rachel Kitsita Ndongo (@rkitsita) February 2, 2022