ಇಂದಿನಿಂದ ಬಜೆಟ್ ಅಧಿವೇಶನ; ನಾಳೆ ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ನವದೆಹಲಿ: ನಾಳೆ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದೆ. ನಾಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನಿಂದಲೇ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಇಂದು ಜಂಟಿ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ನಂತರ ಆರ್ಥಕ ಸಮೀಕ್ಷೆ ಮಂಡನೆಯಾಗಲಿದ್ದು, ನಾಳೆ ಬಜೆಟ್ ಮಂಡನೆಯಾಗುತ್ತದೆ.
ಏಪ್ರಿಲ್ 8ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಆದ್ರೆ ಇಂದು ಪ್ರಾರಂಭವಾಗುವ ಮೊದಲ ಭಾಗದ ಅಧಿವೇಶನ ಫೆಬ್ರವರಿ 11ಕ್ಕೆ ಮುಕ್ತಾಯವಾಗಲಿದೆ. ನಂತರ ಒಂದು ತಿಂಗಳು ವಿರಾಮದ ನಂತರ ಎರಡನೇ ಹಂತದ ಕಲಾಪ ಮಾರ್ಚ್ 14 ರಂದು ಶುರುವಾಗಲಿದೆ. ಏಪ್ರಿಲ್ 8ಕ್ಕೆ ಅಂತ್ಯವಾಗಲಿದೆ. ನಿನ್ನೆ ಸಂಜೆ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು. ಬಜೆಟ್ ಅಧಿವೇಶನದ ವ್ಯವಸ್ಥೆಗಳ ಬಗ್ಗೆ ಇಬ್ಬರೂ ಪರಿಶೀಲನೆ ನಡೆಸಿದರು. ಉಪಾಧ್ಯಕ್ಷರ ನಿವಾಸದಲ್ಲಿ ಭೇಟಿಯಾದ ಇಬ್ಬರೂ ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು.