UP Election : ಪ್ರಧಾನಿ ಮೋದಿ ಇಂದು ವರ್ಚ್ಯುವಲ್ ರ್ಯಾಲಿಯಲ್ಲಿ ಭಾಗಿ
ಲಖನೌ : ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದವರು ಇಂದು ವರ್ಚ್ಯುವಲ್ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ರ್ಯಾಲಿಯಲ್ಲಿ ಭಾಗಿಯಾಗಿ ಮೊದಲ ಹಂತದ ಪ್ರಚಾರ ನಡೆಸಲಿದ್ದಾರೆ.
ಫೆಬ್ರುವರಿ 10ರಂದು ನಡೆಯಲಿರುವ ಚುನಾವಣೆಯ 21 ವಿಧಾನಸಭೆ ಕ್ಷೇತ್ರಗಳ 98 ಕಡೆಗಳಲ್ಲಿ ಪ್ರಸಾರವಾಗಲಿದೆ. ʼಜನ ಚೌಪಲ್ʼ ಹೆಸರಿನ ರ್ಯಾಲಿಯಲ್ಲಿ ನರೇಂದ್ರ ಮೋದಿಯವರು ಮಾಡಲಿರುವ ಪ್ರಚಾರ ಸುಮಾರು 49000 ಜನಕ್ಕೆ ತಲುಪಲಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಕೂಡ ರ್ಯಾಲಿಯಲ್ಲಿ ಅವರಿರುವ ಜಾಗದಿಂದಲೇ ಭಾಗಿಯಾಗಲಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ 500ಕ್ಕಿಂತ ಹೆಚ್ಚು ಜನರು ಒಂದೇ ಕಡೆ ಸೇರುವಂತಿಲ್ಲ.