International

2022ರಲ್ಲಿ ಅಮೆರಿಕಾದಲ್ಲಿ ಮೊದಲ ಮರಣ ದಂಡನೆಗೆ ಕೋರ್ಟ್‌ ಆದೇಶ

ಅಮೆರಿಕಾ: ಈ ವರ್ಷ ಅಮೆರಿಕದಲ್ಲಿ ಮೊದಲ ಮರಣದಂಡನೆ ವಿಧಿಸಲಾಯಿತು. ಡೊನಾಲ್ಡ್ ಆಂಥೋನಿ ಗ್ರಾಂಟ್( 46) ಎಂಬ ವ್ಯಕ್ತಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ವ್ಯಕ್ತಿಯನ್ನು ಮರಣದಂಡನೆಗೆ ಗುರಿ ಮಾಡಲಾಯಿತು. ಬಹಳ ವಿಷಪೂರಿತವಾದ ಈ ಚುಚ್ಚುಮದ್ದನ್ನು ನೀಡಿದ ಸ್ವಲ್ಪ ಸಮಯದಲ್ಲೇ ಮಾನವ ಸಾವನ್ನಪ್ಪುತ್ತಾನೆ.

2001 ರ ಡಬಲ್ ಮರ್ಡರ್ ಪ್ರಕರಣದಲ್ಲಿ ಡೊನಾಲ್ಡ್ ಗ್ರಾಂಟ್ ಅವರನ್ನು ನ್ಯಾಯಾಲಯವು ದೋಷಿ ಎಂದು ತೀರ್ಮಾನಿಸಿ ಮರಣದಂಡನೆ ವಿಧಿಸಿತ್ತು. ಜೈಲಿನಲ್ಲಿದ್ದ ತನ್ನ ಗೆಳತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು  ಬೇಕಾದ ಹಣಕ್ಕಾಗಿ ಹೋಟೆಲ್‌ವೊಂದರಲ್ಲಿ  ದರೋಡೆ ಮಾಡಲು ಪ್ರಯತ್ನಿಸಿದನು. ಆ ವೇಳೆ ಅಡ್ಡ ಬಂದ ಇಬ್ಬರು ಹೋಟೆಲ್ ಸಿಬ್ಬಂದಿಯನ್ನು ಗ್ರಾಂಟ್ ಕೊಲೆ ಮಾಡಿದ್ದ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗೆ 2005ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದ. ಬಾಲ್ಯದಲ್ಲಿ ಕುಡುಕ ತಂದೆಯಿಂದ ಚಿತ್ರಹಿಂಸೆಗೆ ಒಳಗಾದ ನಂತರ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ ಮತ್ತು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ  ಅರ್ಜಿಗಳಲ್ಲಿ ತಿಳಿಸಿದ್ದ. ಆತನ ನಾಟಕೀಯ ಬಟಾಬಯಲಾದ ಮೇಲೆ ಎಲ್ಲಾ ಹೇಳಿಕೆಗಳನ್ನು  ಯುಎಸ್‌ ಸುಪ್ರೀಂ ನ್ಯಾಯಾಲಯವು ತಳ್ಳಿಹಾಕಿ ಮರಣ ದಂಡನೆ ಆದೇಶ ಮಾಡಿತು.

ಅಮೆರಿಕದ ಸುಮಾರು 23 ರಾಜ್ಯಗಳು ಮರಣದಂಡನೆಯನ್ನು ರದ್ದುಪಡಿಸಿವೆ. ಒಕ್ಲಹೋಮ ಸೇರಿದಂತೆ ಹಲವು ರಾಜ್ಯಗಳಲ್ಲಿ ಮರಣದಂಡನೆ ಈಗಲೂ ಚಾಲ್ತಿಯಲ್ಲಿದೆ.

Share Post