National

ಹೆತ್ತವರ ಮಡಿಲು ಸೇರಿದ ಗಡಿಯಲ್ಲಿ ಕಾಣೆಯಾಗಿದ್ದ ಯುವಕ

ಅರುಣಾಚಲ ಪ್ರದೇಶ: ಭಾರತ-ಚೀನಾ ಗಡಿಯಿಂದ ಅರುಣಾಚಲ ಪ್ರದೇಶದ ಯುವಕ ದಾರಿ ತಪ್ಪು ಕಾಣೆಯಾಗಿದ್ದ ಮಿರಾಮ್ ತರೋಣ್‌ನನ್ನು ಸುರಕ್ಷಿತವಾಗಿ ಹೆತ್ತವರಿಗೆ ಒಪ್ಪಿಸಲಾಯಿತು. ವಾರದ ಹಿಂದೆ ಭಾರತೀಯ ಗಡಿಯಲ್ಲಿ ಚೀನಾ ಸೇನೆ ಯುವಕನನ್ನು ಅಪಹರಿಸಿದ್ದ ಸುದ್ದಿಗೆ ಚೀನಾ ಪ್ರತಿಕ್ರಿಯೆ ನೀಡಿದೆ. ತಾವು ಯಾರನ್ನೂ ಅಪಹರಿಸಿಲ್ಲ ಎಂದು ಸ್ಪಷ್ಟಪಡಿಸಿದ ಚೀನೀ ಪಡೆ ಯುವಕ ಮಿರಾಮ್ ತರೋಣ್‌ನನ್ನು ಹುಡಕಾಟ ನಡೆಸಿ, ಅವನು ದಾರಿ ತಪ್ಪಿದ್ದಾನೆ ಎಂದು ದೃಢಪಡಿಸಿತು. ಜನವರಿ 26 ರಂದು ಭಾರತ ಮತ್ತು ಚೀನಾದ ಅಧಿಕಾರಿಗಳ ನಡುವಿನ ಮಾತುಕತೆಯ ನಂತರ ಯುಚಕನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಚೀನಾ ತಿಳಿಸಿತ್ತು.

ಅದರಂತೆ ಗುರುವಾರ ಬೆಳಗ್ಗೆ ಭಾರತ-ಚೀನಾ ಗಡಿಯಲ್ಲಿರುವ ಕಿಬಿತು ಪ್ರದೇಶದಲ್ಲಿ “ವಾಚಾ-ದಮೈ ಇಂಟರ್ಯಾಕ್ಷನ್ ಪಾಯಿಂಟ್” ನಲ್ಲಿ ಚೀನಾದ ಸೇನಾ ಅಧಿಕಾರಿಗಳು ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದರು. ಇದಕ್ಕೂ ಮೊದಲು ಯುವಕನನ್ನು ಗುರುತಿಸಲು ಅರುಣಾಚಲ ಪ್ರದೇಶದ ಟುಟಿಂಗ್‌ನಲ್ಲಿರುವ ಭಾರತೀಯ ಸೇನಾ ಶಿಬಿರದಲ್ಲಿ ಮಿರಾಮ್ ತರೋನ್ ತಂದೆ ಒಪಾಂಗ್ ಟ್ಯಾರೋನ್ ಮತ್ತು ತಾಯಿಯನ್ನು ಕರೆತರಲಾಗಿತ್ತು.  ಎರಡೂ ಕಡೆಯ ಅಧಿಕಾರಿಗಳು ಫೋನ್ ಮತ್ತು ವೀಡಿಯೊ ಕರೆ ಮೂಲಕ ಮಿರಾಮ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ರು. ಅದರೆ ನೆಟ್‌ವರ್ಕ್‌ ಇಶ್ಯೂ ಕಾರನದಿಂದ ಸಾಧ್ಯವಾಗಲಿಲ್ಲ.ಕೊನೆಗೆ  ಟೆಲಿಫೋನ್ ಮೂಲಕ ಮತ್ತೊಮ್ಮೆ ಪ್ರಯತ್ನಿಸಿ ತನ್ನ ತಾಯಿಯ ಧ್ವನಿ ಕೇಳುತ್ತಿದ್ದಂತೆ ಆ ಯುವಕ ಭಾವುಕನಾದ ಎಂದು ಕಿರಣ್‌ ರಿಜಿಜು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜುಜು, ಯುವಕನನ್ನು ಹಸ್ತಾಂತರಿಸಲು ಸಹಕರಿಸಿದ ಭಾರತೀಯ ಸೇನಾ ಅಧಿಕಾರಿಗಳು, ಅರುಣಾಚಲ ಪ್ರದೇಶದ ಸ್ಥಳೀಯ ಭದ್ರತಾ ಸಿಬ್ಬಂದಿ ಹಾಗೂ ಚೀನಾ ಸೇನೆಗೆ ಧನ್ಯವಾದ ತಿಳಿಸಿದ್ದಾರೆ. ಮಿರಾಮ್‌ಗೆ ಸಂಪೂರ್ಣ ವೈದ್ಯಕೀಯ ಪರೀಕ್ಷೆಯ ನಂತರ ಆತನನ್ನು ಪೋಸಕರಿಗೊಪ್ಪಿಸುವ ಕಾರ್‌ ನಡೆದಿದೆ.  ಕಾಣೆಯಾದ ಯುವಕ ಮಿರಾಮ್‌ನನ್ನು ಗುರತಿಸಲು ಯುವಕನ ಪೋಷಕರು ಹಾಗೂ ಆತನ ಬಾಲ್ಯ ಸ್ನೇಹಿತರನ್ನು ಸೇನಾಧಿಕಾರಿಗಳು ಕರೆದೊಯ್ದಿದ್ದರು ಎನ್ನಲಾಗಿದೆ.

Share Post