Politics

ಸಿದ್ದು ಮನೆಯಲ್ಲಿ ಜೆಡಿಎಸ್‌ ಶಾಸಕ ಪುಟ್ಟರಾಜು

ಬೆಂಗಳೂರು : ಮಂಡ್ಯ ಜಿಲ್ಲೆಯ ಮೇಲುಕೋಟೆಯ ಜೆಡಿಎಸ್ ಶಾಸಕರಾಗಿರುವ ಪುಟ್ಟರಾಜು ಅವರು ಸಿದ್ದೃರಾಮಯ್ಯನವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಮೀರ್‌ ಅಹ್ಮದ್‌, ಎಂ ಬಿ ಪಾಟೀಲ್‌ ಅವರೊಟ್ಟಿಗೆ ಪುಟ್ಟರಾಜು ಕಾಣಿಸಿಕೊಂಡಿರುವುದು ಬಾರಿ ಕುತೂಹಲ ಮೂಡಿಸಿದೆ.

ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇದ್ದು, ಆಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದಂತೆ ಕಾಣುತ್ತಿದೆ. ಹಲವು ಶಾಸಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ ಮೊನ್ನೆ ಬಹಿರಂಗವಾಗಿ ಹೇಳಿಕೊಂಡಿತ್ತು. ಈಗ ಪುಟ್ಟರಾಜು ಅವರು ಕಾಂಗ್ರೆಸ್‌ ನಾಯಕರ ಜೊತೆ ಕಾಣಿಸಿಕೊಂಡಿ ಶಾಕ್‌ ನೀಡಿದ್ದಾರೆ.

ನಮ್ಮ ಪಕ್ಷವನ್ನು ಯಾರು ಬಿಟ್ಟು ಹೋಗುವವರು ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಹಾಗೆಯೇ ನಮ್ಮ ಪಕ್ಷದ ಕೆಲವರಿಗೆ ಪಾಪ ಸಿದ್ದರಾಮಯ್ಯನವರಿಂದ ಏನೋ ಕೆಲಸ ಆಗ ಬೇಕಿರುತ್ತದೆ ಹಾಗಾಗಿ ಸಂಪರ್ಕ ಹೊಂದಿರುತ್ತಾರೆ, ಪಾಪ ಸಿದ್ದರಾಮಯ್ಯನವರಿಂದಲೇ ಅವರೆಲ್ಲಾ ಗೆದ್ದಿರೋದು ಎಂದು ಕುಮಾರಸ್ವಾಮಿ ತಮ್ಮ ಪಕ್ಷದ ಕೆಲವು ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.

ಈಗ ಮೇಲುಕೋಟೆಯ ಪುಟ್ಟರಾಜು ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಮುಂದಿನ ದಿನಗಳ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

Share Post