National

ಹೆಚ್ಚಳವಾಗ್ತಿದೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ತಿರಸ್ಕೃತರ ಸಂಖ್ಯೆ

ದೆಹಲಿ: ಪದ್ಮಶ್ರೀ ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ  ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ. ಕೇಂದ್ರ ಸರ್ಕಾರ ನೀಡುವ ಈ ಅತ್ಯುನ್ನತ ಪ್ರಶಸ್ತಿಯನ್ನು ಕೆಲವರು ನಯವಾಗಿ ತಿರಸ್ಕಾರ ಮಾಡಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದ  ನಾಗರೀಕರು ಈ ಪ್ರಶ್ಸ್ತಿಯನ್ನು ನಿರಾಕರಿಸುತ್ತಿರುವುದು ಗಮನಾರ್ಹ. ಹಿರಿಯ ಸಿಪಿಐ (ಎಂ) ನಾಯಕ ಮತ್ತು ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಈಗಾಗಲೇ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಬೆಂಗಾಲಿ ಗಾಯಕಿ ಸಂಧ್ಯಾ ಮುಖರ್ಜಿ ಅವರ ಪುತ್ರಿ ಸೇನ್ ಗುಪ್ತಾ ಪದ್ಮಶ್ರೀ ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಸುಮಾರು 8 ದಶಕಗಳಿಂದ 90ರ ಹರೆಯದಲ್ಲೂ ಹಾಡುತ್ತಿರುವ ವ್ಯಕ್ತಿಗೆ ಪ್ರಶಸ್ತಿ ಘೋಷಣೆ ಮಾಡಿರುವುದು ಅವರ ಸ್ಥಾನಮಾನವನ್ನು ತಗ್ಗಿಸಿದಂತಾಗುತ್ತದೆ. ಅವರ ಕಲೆಯನ್ನು ಗುರುತಿಸುವುದಕ್ಕೆ ಎಂಟು ವರ್ಷ ಬೇಕಾಯಿತಾ ಎಂದು ಪ್ರಶ್ನಿಸಿದ್ದಾರೆ.

ಇವರ ಜೊತೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಖ್ಯಾತ ಬಂಗಾಳಿ ತಬಲಾ ವಾದಕ ಪಂಡಿತ್ ಅನಿಂದ್ಯ ಚಟರ್ಜಿ ಕೂಡ ತಿರಸ್ಕರಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಲಭಿಸಿದೆ ಎಂದು ದೆಹಲಿಯಿಂದ ದೂರವಾಣಿ ಕರೆ ಬಂದ ಕೂಡಲೇ ಅದನ್ನು ನಯವಾಗಿ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ತಮ್ಮ ವೃತ್ತಿಜೀವನದ ಕೊನೆಯಲ್ಲಿ ಪದ್ಮಶ್ರೀ ಸ್ವೀಕರಿಸಲು  ನಾನು ಸಿದ್ಧನಿಲ್ಲ ಎಂದು ಬಹಿರಂಗಪಡಿಸಿದರು. ಆ  ಹಂತನ್ನು ನಾನು ದಾಟಿ ಬಂದಿದ್ದೇನೆ  ಎಂದು ಉತ್ತರಿಸಿದ್ದಾರೆ.

10 ವರ್ಷಗಳ ಹಿಂದೆ ಈ ಪ್ರಶಸ್ತಿ ಬಂದಿದ್ದರೆ ನಾನು ಸಂತೋಷದಿಂದ ಸ್ವೀಕರಿಸುತ್ತಿದ್ದೆ. ಈಗ ನಾನು ಪ್ರಶಸ್ತಿ ತೆಗೆದುಕೊಳ್ಳುವುದಿಲ್ಲ.. ಕ್ಷಮಿಸಿ ಎಂದು ಅನಿಂಧ್ಯಾ ಚಟರ್ಜಿ ಹೇಳಿದ್ದಾರೆ. ಅವರು ಪಂಡಿತ್ ರವಿಶಂಕರ್, ಉಸ್ತಾದ್ ಅಮ್ಜದ್ ಅಲಿ ಖಾನ್ ಮತ್ತು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಂತಹ ಶ್ರೇಷ್ಠರೊಂದಿಗೆ ಕೆಲಸ ಮಾಡಿದರು. 2002ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಕೂಡ ಅನಿಂದ್ಯ ಪಡೆದಿದ್ದಾರೆ.

Share Post