ಸಮೋಸಾ ತಿಂದು ಖುಷಿಯಲ್ಲಿ ತೇಲಾಡಿದ ಅಜ್ಜ: ವಿಡಿಯೋ ವೈರಲ್
ಇಟಲಿ: ತಿಂಡಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ..ಅದರಲ್ಲೂ ಬಗೆ ಬಗೆಯ ಖಾದ್ಯಗಳನ್ನು ನೋಡ್ತಿದ್ರೆ ಬಾಯಲ್ಲಿ ನೀರೂರುತ್ತವೆ. ಪ್ರತಿಯೊಂದು ಪ್ರದೇಶಕ್ಕೆ ತಕ್ಕಂತೆ ಅಲ್ಲಿನ ರುಚಿ, ಸಾಂಪ್ರದಾಯಿಕ ಅಡುಗೆಗಳು ಇರುತ್ತವೆ. ಪ್ರತಿಯೊಬ್ಬರಿಗೂ ಎಲ್ಲವನ್ನು ರುಚಿ ನೋಡುವಾಸೆ ಇರುತ್ತದೆ. ಇತ್ತೀಚೆಗಂತೂ ತಂತ್ರಜ್ಞಾನದ ಪುಣ್ಯ ಅಂತ ವಿಶ್ವದಾದ್ಯಂತ ಚಾಲ್ತಿಯಲ್ಲಿರುವ ಬಗೆ ಬಗೆ ಅಡುಗೆಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಸ್ವಿಗ್ಗಿ, ಜೊಮೆಟೊನಂತಹ ಫುಡ್ ಡೆಲಿವರಿ ಆನ್ಲೈನ್ ಆಪ್ನಿಂದ ಬೇಕಾದ ತಿನಿಸುಗಳನ್ನು ತರಿಸಿಕೊಂಡು ತಿನ್ನಬಹುದು. ಈಗ ಎಲ್ಲವೂ ನಿಮ್ಮ ಅಂಗೈಯಲ್ಲೇ ಸಿಗುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ.
ಅದರಲ್ಲೂ ಭಾರತದಲ್ಲಿ ಸಿಗುವ ಸಮೋಸಾ ಎಲ್ಲರ ಅಚ್ಚುಮೆಚ್ಚು, ಭಾರತೀಯ ಅಡುಗೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ. ಬಹುತೇಕ ವಿದೇಶಿಯರುಇ ಭಾರತದಲ್ಲಿ ದೊರೆಯುವ ಊಟ ರುಚಿಸಲೆಂದೇ ಬರುತ್ತಾರೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋವಂದು ಸುದ್ದಿ ಮಾಡುತ್ತಿರುವ ವಿಷಯವೇ ʻಸಮೋಸಾʼ ಇಟಲಿಯಲ್ಲಿರುವ ಅಜ್ಜ ಸಮೋಸ ತಿಂದ ಬಳಿಕ ನೀಡಿರುವ ಪ್ರತಿಕ್ರಿಯೆಬ ಇದೆಯಲ್ಲಾ ನಗು ತರಿಸುವಂತಿದೆ. ಅಜ್ಜನ ಸಮೋಸಾ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಪೋಸ್ಟ್ ಅನ್ನು ಇಟಲಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ದಂಪತಿ ಪೋಸ್ಟ್ ಮಾಡಿದ್ದಾರೆ. ಅಂಬ್ರಾ ಅವರ ತಂದೆ ಇದುವರೆಗೂ ಸಮೋಸಾ ತಿಂದೇ ಇಲ್ಲವಂತೆ. ಮೊದಲ ಬಾರಿಗೆ ಸಮೋಸಾಗೆ ಹಸಿ ಖಾರದ ಚಟ್ನಿ ಹಾಕಿ ಸಮೋಸಾವನ್ನ ಆಸ್ವಾದಿಸಿದ್ದಾರೆ. ತಿಂದ ಬಳಿಕ ಕೂತಲ್ಲಿಂದಲೇ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಅನೇಕ ಭಾರತೀಯರು ಕಮೆಂಟ್ ಮಾಡಿ, ಮತ್ತಷ್ಟು ಭಾರತೀಯ ಖಾದ್ಯಗಳನ್ನು ನಿಮ್ಮ ತಂದೆಯವರಿಗೆ ತಿನಿಸಿ ಎಂದು ಸಲಹೆ ಕೂಡ ಕೊಟ್ಟಿದ್ದಾರೆ.