ಸಿದ್ದರಾಮಯ್ಯ ನೀವೇನು ಸತ್ಯ ಹರಿಶ್ಚಂದ್ರರಲ್ಲ ಎಂದು ಗುಡುಗಿದ ಕುಮಾರಸ್ವಾಮಿ
ಬೆಂಗಳೂರು: ತಾವು ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಬೆನ್ನ ಹಿಂದೆ ಮಾಡಿದ ಕೆಲಸಗಳು ಒಂದಾ ಎರಡಾ ಎಂದು ಸುದ್ದಿಗೋಷ್ಟಿಯಲ್ಲಿ ಬಹಿರಂಗವಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ್ರು. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರನ್ನು ಮೂಲೆಗುಂಪು ಮಾಡಿದ್ದಾರೆ. ಅನ್ನದಾನಿ ಎಂಎಲ್ಎ ಆಗೋಕೆ ನಾವೇ ಫಂಡ್ ನೀಡಿದ್ವಿ, ಅನ್ನದಾನಿಗೆ ಟಿಕೆಟ್ ಕೊಡಬೇಡಿ ಎಂದು ನಮ್ಮ ಮೇಲೆ ಒತ್ತಡ ಕೂಡ ಹಾಕಿದ್ರು. ಆದ್ರೆ ಅವರ ಮಾತಿಗೆ ಬೆಲೆಕೊಡದೆ ಕಾರ್ಯಕರ್ತರ ವಿರೋಧದ ನಡುವೆಯೂ ಟಿಕೆಟ್ ಕೊಟ್ಟು ದೇಣಿಗೆ ನೀಡಿ ಗೆಲ್ಲಿಸಿಕೊಂಡೆವು.
ನಾವು ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ಗೆದ್ದಿದ್ದು. ಸಿದ್ದರಾಮಯ್ಯ ಹೋದ್ರೂ 19% ಮತ ನಮಗಿದೆ. ನೀವು ಕಾಂಗ್ರೆಸ್ ಅಭ್ಯರ್ಥಿ ಸೋಲಿಸೋಕೆ ಯಾರನ್ನ ಬಳಸಿಕೊಂಡ್ರಿ, ಯಾರಿಗೆ ಹಣವನ್ನ ಕೊಟ್ಟಿದ್ರಿ ಎಲ್ಲವೂ ನಮಗೆ ಗೊತ್ತಿದೆ ಸಿದ್ದರಾಮಯ್ಯನವರೇ….ನೀವು ಎದೆ ಮುಟ್ಟಿಕೊಂಡು ಒಪ್ಪಿಕೊಳ್ಳಿ ಕೈ ಮುಖಂಡರನ್ನ ಮುಗಿಸೋಕೆ ಏನೇನ್ಮಾಡಿದ್ರಿ ಅನ್ನೋದನ್ನು ಜನರ ಮುಂದೆ ಸತ್ಯವನ್ನ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ನೀವೇನೂ ಸತ್ಯಹರಿಶ್ಚಂದ್ರರಲ್ಲ ಅರ್ಥವಾಯ್ತೇ ನಾವು ಹೆದರುವುದು ರಾಜ್ಯದ ಜನತೆಗೆ ಮಾತ್ರ ನಿಮ್ಮಂಥವರನ್ನು ನೋಡಿ ನಾನು ಹೆದರುವುದಿಲ್ಲ.
ರಮೇಶ್ ಜಾರಕಿಹೊಳಿ 16ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ ಆದರೆ ಜೆಡಿಎಸ್‌ಗೆ ನಾವು ಕೈ ಹಾಕೋದಿಲ್ಲ ಎಂದಿದ್ದಾರೆ. ಅಷ್ಟಾದ್ರೂ ಅವರಿಗೆ ನಮ್ಮ ಮೇಲೆ ಗೌರವ ಇದೆ. ನಿಮಗೆ ಅದ್ಯಾವುದೂ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2013 ರಲ್ಲಿ ನಾವು ಹೋರಾಟ ಮಾಡಿದ್ದರ ಫಲವಾಗಿ ನೀವು ಅಧಿಕಾರಕ್ಕೆ ಬಂದ್ರಿ. ೫ ವರ್ಷ ಅಧಿಕಾರ ಮಾಡಿ ಯಾಕೆ ೭೮ ಸ್ಥಾನಗಳಿಗೆ ಕೆಳಕ್ಕಿಳಿದ್ರಿ ಅಂತ ಗೊತ್ತಾ..? ಈಗ ಶಕ್ತಿ ವೃದ್ಧಿ ಮಾಡಿಕೊಳ್ಳೋಕೆ ಪರದಾಡ್ತಿದ್ದಾರೆ ಅಂಥದ್ರಲ್ಲಿ ಜೆಡಿಎಸ್ ಬಗ್ಗೆ ನೀವು ಮಾತನಾಡಲು ಬರಬೇಡಿ. ನೋಡ್ತಾ ಇರಿ 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಬಿಟ್ಟು ನೀವೇನು ಮಾಡಲಾಗಲ್ಲ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.