DistrictsNational

ರೈತನಿಗೆ ನಡೆದ ಅವಮಾನವನ್ನು ಖಂಡಿಸಿದ ಆನಂದ್‌ ಮಹೀಂದ್ರ: ಕ್ರಮಕ್ಕೆ ಆದೇಶ

ತುಮಕೂರು: ತುಮಕೂರು ರೈತನಿಗೆ ಮಹೀಂದ್ರಾ ಶೋ ರೂಂನವರು ಮಾಡಿದ ಅವಮಾನದ ವಿಚಾರ ನೇರಾನೇರ ಕಂಪನಿ ಮಾಲೀಕ ಆನಂದ್‌ ಮಹೀಂದ್ರ ಕಿವಿಗೆ ಬಿದ್ದಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ತಮಕೂರು ಮಹೀಂದ್ರಾ ಎಸ್‌ಯುವಿ ಶೋರೂಂನಲ್ಲಿ ಒಬ್ಬ ರೈತ ಬೊಲೆರೊ ಖರೀದಿಸಲು ತನ್ನ ಸ್ನೇಹಿತರೊಂದಿಗೆ ಮಹೀಂದ್ರಾ ಶೋರೂಮ್‌ಗೆ ಹೋಗುತ್ತಾನೆ. ಅವರ ಉಡುಗೆಯನ್ನು ನೋಡಿದ ಶೋರೂಮ್‌ನಲ್ಲಿ (ಮಹೀಂದ್ರ ಎಸ್‌ಯುವಿ ಶೋರೂಂ) ಸೇಲ್ಸ್‌ಮ್ಯಾನ್ ಕೆಟ್ಟದಾಗಿ ಅವಮಾನಿಸಲ್ಪಟ್ಟ ವಿಚಾರವನ್ನು ಗಿರಿಸೊನ್ನಸೆರಿ ಎಂಬ ವ್ಯಕ್ತಿ ಟ್ವೀಟ್‌ ಮಾಡಿ  ಆನಂದ್‌ ಮಹೀಂದ್ರಾ ಅವರಿಗೆ ಟ್ಯಾಗ್‌ ಮಾಡಿ ಅವರ ಗಮನಕ್ಕೆ ತಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. MahindraRise  ಕಂಪನಿಯ ಮುಖ್ಯ ಉದ್ದೇಶ, ಸಮುದಾಯಗಳನ್ನು ಅಭಿವೃದ್ಧಿಪಡಿಸುವುದು, ಎಲ್ಲಾ ಪಾಲುದಾರರು ಹಾಗೂ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದಾಗಿದೆ. ಈ ಸಿದ್ದಾಂತಕ್ಕೆ ಯಾವುದೇ ರೀತಿಯ ಕಪ್ಪುಚುಕ್ಕೆ, ಮಸಿ ಬಳಿಯುವ ಪ್ರಯತ್ನ ಅಥವಾ ಉಲ್ಲಂಘನೆ ಮಾಡಿದ್ರೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಛೇರ್‌ಮೆನ್‌ ಆನಂದ್‌ ಮಹೀಂದ್ರಾ ತಿಳಿಸಿದ್ರು.

ಇನ್ನೂ ಮಹೀಂದ್ರಾ ಕಂಪನಿಯ  ಸಿಇಒ ವಿಜಯ್ ನಕ್ರಾ ಪ್ರತಿಕ್ರಿಯೆ ನೀಡಿ ಗ್ರಾಹಕರಿಗೆ ಇಷ್ಟವಾಗುವಂತೆ ಅವರ ಮನವೊಲಿಸುವಲ್ಲಿ ಅವರ ಇಷ್ಟಕ್ಕೆ ತಕ್ಕಂತೆ ಡೀಲರ್‌ಗಳು ಕೆಲಸ ಮಾಡಬೇಕು. ನಾವು ಯಾವಾಗಲೂ ನಮ್ಮ ಎಲ್ಲ ಗ್ರಾಹಕರನ್ನು ಗೌರವಿಸುತ್ತೇವೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮರು ಟ್ವೀಟ್ ಮಾಡಿದ್ದಾರೆ. ಈ ರಿಟ್ವೀಟ್‌ಗೆ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ.

ಏನಿದು ಘಟನೆ..?

ಎರಡು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಕೆಂಪೇಗೌಡ ಎಂಬ ರೈತ ಬೊಲೆರೊ ಪಿಕ್ ಅಪ್ ಟ್ರಕ್ ಖರೀದಿಸಲು ಶೋರೂಮ್ ಗೆ ಹೋಗಿದ್ದರು. ತನಗೆ ಕಾರು ಕೊಳ್ಳುವುದು ಕಷ್ಟ ಎಂದು ಸೇಲ್ಸ್ ಮ್ಯಾನ್ ನಿಂದಿಸಿದ್ದಾನೆ. ಮಾರಾಟಗಾರರ ಕಾಮೆಂಟ್‌ಗಳಿಗೆ ರೈತ ಸವಾಲು ಎಸೆದು. ದಿಗ್ಗಜರು ಸಿನಿಮಾ ಸ್ಟೈಲಿನಲ್ಲಿ ಇಪ್ಪತ್ತೈದು ನಿಮಿಷಗಳಲ್ಲಿ ರೂ. 10 ಲಕ್ಷ ನಗದು ಹಣದೊಂದಿಗೆ ಶೋರೂಂಗೆ ಮರಳಿ ಕಾರು ಡೆಲಿವರಿ ಕೊಡುವಮತೆ ಕೇಳಿದ್ದಾರೆ.  ಈ ವೇಳೆ ಇಬ್ಬರ ನಡುವೆ ಸುದೀರ್ಘ ವಾಗ್ವಾದ ನಡೆದು,ಕೊನೆಗೆ ಮಾರಾಟಗಾರ ರೈತನ ಕ್ಷಮೆಯಾಚಿಸಿದ್ದಾನೆ ಈ ವಿಚಾರ ಈಗ ದೇಶದೆಲ್ಲೆಡೆ ಬಿಸಿ ಬಿಸಿ ಸುದ್ದಿಯಾಗಿ ಹರಿದಾಡ್ತಿದೆ.

 

Share Post