Sports

‌IPL 2022: ಮೆಗಾ ಆಕ್ಷನ್‌ಗೆ ಹೆಸರು ನೋಂದಾಯಿಸಿದ ಶ್ರೀಶಾಂತ್

ತಿರುವನಂತಪುರಂ : ತಿರುವನಂತಪುರಂ ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದಿರುವ ವೇಗಿ ಶ್ರೀಶಾಂತ್‌ ಅವರು 2022ರ ಐಪಿಎಲ್‌ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 2013ರಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದ ಆರೋಪದ ಮೇಲೆ ಶ್ರೀಶಾಂತ್‌ ಅವರಿಗೆ 7 ವರ್ಷಗಳ ನಿಷೇಧ ಹೇರಲಾಗಿತ್ತು. ‌

ಕಳೆದ ವರ್ಷದ ಹರಾಜಿನಲ್ಲಿಯೇ ತಮ್ಮ ಹೆಸರು ನೋಂದಾರಿಸಿಕೊಂಡಿದ್ದ ಶ್ರೀಶಾಂತ್‌ ಅವರ ಹೆಸರು ಅಂತಿಮ ಪಟ್ಟಿಯಿಂದ ಕಾಣೆಯಾಗಿತ್ತು. ಈ ಬಾರಿ ಮತ್ತೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ಶ್ರೀಶಾಂತ್‌ ಅವರು ತಮ್ಮ ಮೂಲ ಬೆಲೆಯನ್ನು 50ಲಕ್ಷ ರೂಪಾಯಿಗೆ ನಿಗದಿ ಪಡಿಸಿಕೊಂಡಿದ್ದಾರೆ.

ಇದುವರೆಗೂ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌, ಕೊಚ್ಚಿ ಟಸ್ಕರ್ಸ್‌, ಪಂಜಾಬ್‌ ಪರ ಆಡಿರುವ ವೇಗಿ ಶ್ರೀಶಾಂತ್‌ ಅವರು ಒಟ್ಟು 44 ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚೆಗೆ ನಡೆದ ವಿಜಯ್‌ ಹಜಾರೆ, ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಗಳಲ್ಲಿ ಕೇರಳ ತಂಡದ ಮೂಲಕ ಪ್ರತಿನಿಧಿಸಿದ್ದ ಶ್ರೀಶಾಂತ್‌ ಅವರನ್ನು ಯಾವ ತಂಡ ಸೇರಿಸಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

 

Share Post