CrimeNational

ಗರ್ಭಿಣಿ ಅರಣ್ಯ ಸಿಬ್ಬಂದಿ ಮೇಲೆ ದರ್ಪ: ಇಬ್ಬರು ಅರೆಸ್ಟ್‌

ಮಹಾರಾಷ್ಟ್ರ: ಅರಣ್ಯ ಕಾರ್ಮಿಕರ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ, ಕರ್ತವ್ಯ ನಿರತ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತಾರಾದ ಪಾಲ್ಸವಾಡೆಯಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಪತ್ನಿ ಮಹಿಳಾ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಹಿಳಾ ಸಿಬ್ಬಂದಿ ಮೂರು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಸದ್ಯ ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಾಜಿ ಸರಪಂಚ್ ಮತ್ತು ಸ್ಥಳೀಯ ಅರಣ್ಯ ಸಮಿತಿಯ ಸದಸ್ಯ ಎನ್ನಲಾಗಿದೆ.

ಘಟನೆ ಬಗ್ಗೆ ಸಂತ್ರಸ್ತೆ ವಿವರಣೆ ನೀಡಿದ್ದಾರೆ, ನಾನು ಕರ್ತವ್ಯಕ್ಕೆ ಸೇರಿದಾಗಿನಿಂದ ಮಾಜಿ ಸರಪಂಚ್‌ ಆಗಿದ್ದ ಅವರು ನನಗೆ ಬೆದರಿಕೆ ಹಾಕಿ ಹಣ ಕೊಡುವಂತೆ ಪೀಡಿಸುತ್ತಿದ್ದರು. ಅವರ ಗೊಡ್ಡು ಬೆದರಿಕೆಗಳಿಗೆ ಬಗ್ಗದೆ ಹಣ ನೀಡದಿದ್ದಕ್ಕೆ ನಿನ್ನೆ ಕೆಲಸದಿಂದ ಹಿಂದಿರುಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ನನ್ನ ಪತಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಅರಣ್ಯ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಸತಾರಾ ಎಸ್‌ಪಿ ಅಜಯ್ ಕುಮಾರ್‌ ಬನ್ಸಾಲ್‌ ಅವರು ಮಾತನಾಡಿ ಹಲ್ಲೆಗೊಳಗಾದ ನಮ್ಮ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸ್‌ ಪೇದೆಗೆ ಸದ್ಯ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಆದರೆ ಅವರ ಗರ್ಭಕ್ಕೆ ಏನಾದರೂ ತೊಂದರೆ ಉಂಟಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ರು.

ಇನ್ನೂ ಈ ಘಟನೆಯನ್ನು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಗಂಭಿರವಾಗಿ ಪರಿಗಣಿಸಿದೆ. ಆಯೋಗವು ಎಸ್ಪಿ ಸತಾರಾ ಅವರಿಂದ ವಿವರವಾದ ವರದಿಯನ್ನು ಪಡೆದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

Share Post