National

ಮತ್ತೆ ಎಂಇಎಸ್‌ ಪುಂಡಾಟಿಕೆ : 22ರಂದು ಕರ್ನಾಟಕ ಗಡಿ ಪ್ರವೇಶದ ಎಚ್ಚರಿಕೆ

ಮಹಾರಾಷ್ಟ್ರ: ಗಡಿಯಲ್ಲಿ ಎಂಇಎಸ್‌ ಪುಂಡಾಟಿಕೆ ಕನ್ನಡಿಗರಿಗೆ ಹೊಸದೇನಲ್ಲ. ಯಾವುದಾದರೊಂದು ಖ್ಯಾತೆ ತೆಗೆಯುತ್ತಾ ಕನ್ನಡಿಗರನ್ನು ಕೆಣಕದಿದ್ರೆ ಅವರಿಗೆ ತಿಂದ ಅನ್ನ ಜೀರ್ಣ ಆಗುಲ್ಲ ಅನಿಸುತ್ತೆ. ಈಗ ಮತ್ತೊಂದು ಸವಾಲೆಸೆದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಹೌದು ಬರುವ ಜನವರಿ 22ರಂದು ಶಿವಸೇನೆ ಏಕೀಕರಣ ಸಮಿತಿಯವರು ಕರ್ನಾಟಕ ಗಡಿ ಪ್ರವೇಶ ಮಾಡೇ ಮಾಡ್ತೀವಿ ಎಂದು ವಿಜಯ ದೇವಣೆ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದವರನ್ನು ಗೂಂಡಾಗಳೆಂದು ತಮ್ಮ ಭಿತ್ತಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಶಿವಾಜಿ ಮಹಾರಾಜರಿಗೆ ಅಪಮಾಣ ಆದ ಕಾರಣ ಇದೇ ತಿಂಗಳ 22ರಂದು ಬೆಳಗ್ಗೆ ಒಂಭತ್ತು ಗಂಟೆಯಿಂದ ದಂಡಿ ಯಾತ್ರೆ ಮಾಡುವುದಅಗಿ ಕರೆ ನೀಡಿದ್ದಾರೆ. ಇದರ ಜೊತೆಗೆ ಜೈಲಿನಲ್ಲಿರುವವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಗಡಿ ಪ್ರವೇಶ ಮಾಡುತ್ತೇವೆ. ಒಂದು ವೇಳೆ ಪೊಲೀಸರು ತಡೆದರೆ, ಸಾವಿರಾರು ಸಂಖ್ಯೆಯಲ್ಲಿ ಶಿವಸೇನೆ ಕಾರ್ಯಕರ್ತರು ಮುನ್ನುಗ್ಗುತ್ತೇವೆ ಎಂದು ಶಿವಸೇನೆ ಹೋರಾಟಗಾರ ವಿಜಯ ದೇವಣೆ ಸವಾಲು ಎಸೆದಿದ್ದಾರೆ.

ಈ ಹಿಂದೆ ಕನ್ನಡ ಬಾವುಟವನ್ನು ಸುಟ್ಟಿ, ಸಂಗೊಳ್ಳಿ ರಾಯಣ್ಣರ ಪುತ್ಥಳಿಯನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದರು, ಎಂಇಎಸ್‌ ವಿರುದ್ಧ ರಾಜ್ಯದಲ್ಲಿ ಬೃಹತ್‌ ಪ್ರತಿಭಟನೆ ನಡೆದಿತ್ತು. ರಾಜ್ಯದಲ್ಲಿ ಎಂಇಎಸ್‌ ಬ್ಯಾನ್‌ ಮಾಡುವಂತೆ ಕರವೇ ಕಾರ್ಯಕರ್ತರು ಕರ್ನಾಟಕ ಬಂದ್‌ ಅನ್ನು ಕೂಡ ಹಮ್ಮಿಕೊಂಡಿದ್ದರು. ಕೊರೊನಾ ಹಿನ್ನೆಲೆ ಬಂದ್‌ ಕೈ ಬಿಡಬೇಕಾಯಿತು.

Share Post