Sports

Ind vs Sa 1st ODI : ಭಾರತಕ್ಕೆ ಹೀನಾಯ ಸೋಲು

ದ.ಆಫ್ರಿಕಾ ನೆಲದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ದ.ಆಫ್ರಿಕಾ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದ.ಆಫ್ರಿಕಾ ತಂಡ, ನಿಗದಿತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 296 ರನ್‌ ಗಳಿಸಿತ್ತು. ದ.ಆಫ್ರಿಕಾ ಪರ ರಾಸಿ ವಾನ್ ಡೆರ್ ದುಸಾಯ್ ಮತ್ತು ತೆಂಬಾ ಬಾವುಮಾ ಶತಕ ಸಿಡಿಸಿ ಭಾರತಕ್ಕೆ ಮುಳುವಾದರು.

ಇನ್ನು ಭಾರತ ನಿಗದಿತ ಓವರ್‌ಗಳಲ್ಲಿ 265 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ, ಶಾರ್ದುಲ್‌ ಠಾಕೂರ್ ಅರ್ಧಶತಕ‌ ಬಿಟ್ಟರೆ ತಂಡದ ಬೇರಾವ ಆಟಗಾರರೂ ಉತ್ತಮ ಆಟ ಆಡಲಿಲ್ಲ.

ಸ್ಟಾರ್‌ ಆಟಗಾರರಿದ್ದರೂ ಭಾರತ ಗೆಲ್ಲಲು ಆಗುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Share Post