Politics

48 ಗಂಟೆಯಲ್ಲಿ ಬಂದು ಶರಣಾಗು; ಪ್ರಜ್ವಲ್ ಗೆ ಕುಮಾರಸ್ವಾಮಿ ಕರೆ

ಬೆಂಗಳೂರು; ಮಾಜಿ ಪ್ರಧಾನಿ ದೇವೇಗೌಡರು ಹಾಗೂ‌ ನನ್ನ ಮೇಲೆ ಅಭಿಮಾನವಿದ್ದರೆ ಎಲ್ಲಿದ್ದರೂ‌ ನೀನು 48 ಗಂಟೆಗಳಲ್ಲಿ ಎಸ್ ಐಟಿಗೆ ಶರಣಾಗು ಎಂದು ಸಂಸದ ಪ್ರಜ್ವಕ್ ರೇವಣ್ಣಗೆ ಮಾಜಿ ಸಿಎಂ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.. ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಬಿಡುಗಡೆಯಾದ ಮೇಲೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು.. ನೋಟಿಸ್ ಕೊಟ್ಟರೂ ಅವರು ವಾಪಸ್ ಬಂದಿಲ್ಲ. ಹೀಗಾಗಿ ಕುಮಾರಸ್ವಾಮಿಯವರು ಸುದ್ದಿಗೋಷ್ಠಿ ನಡೆಸಿ ಶರಣಾಗುವಂತೆ ಕರೆ ಕೊಟ್ಟಿದ್ದಾರೆ..

  ಕೈಮುಗಿದು ಮನವಿ ಮಾಡುತ್ತೇನೆ.. ಮೊದಲು ನೀನು ಶರಣಾಗು.. ಈ ನೆಲದ ಕಾನೂನು ಇದೆ.. ಯಾಕೆ ಹೆದರಬೇಕು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ..

   ವಿದೇಶದಿಂದ ಬಂದು ತನಿಖೆಗೆ ಸಹಕರಿಸು ಎಂದು ಕುಮಾರಸ್ವಾಮಿ ಪ್ರಜ್ವಲ್ ಗೆ ವಿನಂತಿಸಿದ್ದಾರೆ.

Share Post