Districts

10 ವರ್ಷದ ವೇತನ ವಾಪಸ್ ನೀಡುವಂತೆ ಹಿರೇಮಗಳೂರು ಕಣ್ಣನ್ ಗೆ ನೋಟಿಸ್

ಚಿಕ್ಕಮಗಳೂರು; ಕನ್ನಡದ ಪೂಜಾರಿ ಎಂದೇ ಖ್ಯಾತರಾಗಿರುವ ಹಿರೇಮಗಳೂರು ಕಣ್ಣನ್ ಅವರ ವೇತನವನ್ನು ಸರ್ಕಾರ ತಡೆ ಹಿಡಿದಿದೆ. ಜೊತೆಗೆ ಹಿಂದಿನ ಹತ್ತು ವರ್ಷಗಳಲ್ಲಿ ಪಡೆದ ವೇತನವನ್ನು ಹಿಂತಿರುಗಿಸುವಂತೆ ನೊಟೋಸ್ ನೀಡಲಾಗಿದೆ.

 

ಹಿರೇಮಗಳೂರು ಕಣ್ಣನ್ ಅವರು ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರವಲಯದ ಕಲ್ಯಾಣ ಕೋದಂಡರಾಮ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿದ್ದಾರೆ. ಆದ್ರೆ ಇದೀಗ ದೇಗುಲದ ಆದಾಯ ಕಡಿಮೆ ಆಗಿದೆ ಎಂದು ಕಾರಣ ನೀಡಲಾಗಿದೆ. ಕಣ್ಣನ್ ಅವರಿಗೆ ಸರ್ಕಾರದಿಂದ ತಿಂಗಳಿಗೆ 7500 ರೂಪಾಯಿ ವೇತನ ನೀಡಲಾಗುತ್ತಿತ್ತು. ಆದಾಯ ಕಡಿಮೆಯಾಗಿದ್ದರಿಂದ ಈ ಹಿಂದೆ ಹತ್ತು ವರ್ಷಗಳಲ್ಲಿ ಪಡೆದ ವೇತನದಲ್ಲಿ ತಿಂಗಳಿಗೆ 4500 ರೂಪಾಯಿ ವಾಪಸ್ ಮಾಡಬೇಕೆಂದು ನೋಟಿಸ್ ನೀಡಲಾಗಿದೆ.

 

 4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ಕನ್ನಡದ ಪಂಡಿತ, ಅರ್ಚಕ ಹಿರೇಮಗಳೂರು ಕಣ್ಣನ್​​ ಅವರಿಗೆ ತಹಸೀಲ್ದಾರ್ ಸುಮಂತ್ ನೋಟಿಸ್​​ ನೀಡಿದ್ದಾರೆ. ಜೊತೆಗೆ ಜಿಲ್ಲಾಡಳಿತ ಹಿರೇಮಗಳೂರು ಕಣ್ಣನ್ ಅವರ ವೇತನವನ್ನೂ ತಡೆ ಹಿಡಿದಿದೆ.

 

Share Post