ಪಂಜಾಬ್ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪಂಜಾಬ್: ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಬ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡಗಡೆ ಮಾಡಿದ್ದು, ಅಭ್ಯರ್ಥಿಗಳು ಕಣಕ್ಕಿಳಿಯಲಿರುವ ಕ್ಷೇತ್ರಗಳನ್ನು ಕೂಡ ತಿಳಿಸಿದೆ.
ಅಭ್ಯರ್ಥಿಗಳು ಮತ್ತು ಕ್ಷೇತ್ರದ ಹೆಸರು
೧. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು – ಅಮೃತಸರ ಪೂರ್ವದಿಂದ ಸ್ಪರ್ಧೆ
೨. ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ- ಚಮ್ಕೌರ್ ಸಾಹಿಬ್ನಿಂದ ಸ್ಪರ್ಧೆ
೩. ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ – ಡೇರಾ ಬಾಬಾ ನಾನಕ್ ಕ್ಷೇತ್ರ
೪. ರಾಜ್ಯ ಸಾರಿಗೆ ಸಚಿವ ರಾಜಾ ಅಮರಿಂದರ್ ವಾರಿಂಗ್ – ಗಿಡ್ದರ್‌ಬಾಹಾದಿಂದ ಸ್ಪರ್ಧೆ
೫. ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್- ಮೊಗಾ ಕ್ಷೇತ್ರ
೬. ಪಂಜಾಬಿ ಗಾಯಕ ಸಿಧು ಮುಸೇವಾಲಾ – ಮಾನ್ಸಾದಿಂದ ಕಣಕ್ಕೆ
೭. ಮಜಿತಾ – ಜಗವಿಂದರ್ ಪಾಲ್ ಸಿಂಗ್ (ಜಗ್ಗ ಮಜಿತಾ), ೮. ಅಮೃತಸರ ಪಶ್ಚಿಮ – ರಾಜ್ ಕುಮಾರ್ ವೆರ್ಕಾ,
೯. ಫತೇಘರ್ ಸಾಹಿಬ್ – ಕುಲ್ಜೀತ್ ನಗ್ರಾ, ೧೦. ಭಟಿಂಡಾ ಅರ್ಬನ್ – ಮನ್‌ಪ್ರೀತ್ ಸಿಂಗ್ ಬಾದಲ್,
೧೧. ಸಂಗ್ರೂರ್ – ವಿಜಯ್ ಇಂದರ್ ಸಿಂಗ್ಲಾ, ೧೨. ಫತೇಘರ್ ಚುರಿಯನ್ – ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ ಸ್ಪರ್ಧೆ ಮಾಡಲಿದ್ದಾರೆ.
ಪಂಜಾಬ್‌ನಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.