ಪಾದಯಾತ್ರೆಗೆ ಹೆಜ್ಜೆ ಹೆಜ್ಜೆಗೂ ಅಡೆ-ತಡೆ: ರಾಮನಗರದಲ್ಲಿ ನಿಷೇಧಾಜ್ಞೆ
ರಾಮನಗರ: ಕೊರೊನಾ ಕಾರಣ ನೀಡಿ ರಾಮನಗರ ಜಿಲ್ಲೆಯಾದ್ಯಂತ ಇರುವ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಿದ್ದಾರೆ. ಈ ಕೂಡಲೇ ನಿಷೇಧಾಜ್ಞೆ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿರುವ ರಾಮದೇವರಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಕಣ್ವ ಜಲಾಶಯ, ಮಂಚನಬೆಲೆ, ಸಾವನದುರ್ಗ, ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್‌ಗಳಿಗೆ ಪ್ರವಾಸಿಗರು ಬರದಂತೆ ತಾಕೀತು ಮಾಡಲಾಗಿದೆ. ಆದ್ರೆ ಇದು ಪಾದಯಾತ್ರೆಗೆ ಸೆಡ್ಡು ಹೊಡೆಯಲು ಬಿಜೆಪಿ ಮಾಡಿರುವ ಪ್ಲಾನ್ ಎಂದು ಕಾಂಗ್ರೆಸ್ ಕಿಡಿಕಾರಿದೆ. ನಿಷೇಧಾಜ್ಞೆ ನೇರ ಪ್ರಭಾವ ಮೇಕೆದಾಟು ಪಾದಯಾತ್ರೆ ಬೀಳಲಿದೆ ಎನ್ನಲಾಗ್ತಿದೆ.
ಈಗಾಗಲೇ ಕಾಂಗ್ರೆಸ್ ಪಾದಯಾತ್ರೆ ಪ್ರಾರಂಭಿಸುವ ಕಾವೇರಿ ಮತ್ತು ಅರ್ಕಾವತಿ ನದಿ ಸೇರುವ ಸಂಗಮಕ್ಕೂ ನಿಷೇಧ ಹೇರಿದ್ದು, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.