ಬಿಜೆಪಿ ಸಚಿವರ ಪ್ರಚೋದನಕಾರಿ ಹೇಳಿಕೆಗೆ ಡಿ.ಕೆ.ಸುರೇಶ್ ಕೆಂಡಾಮಂಡಲ
ರಾಮನಗರ: ರಾಮನಗರದಲ್ಲಿ ಪ್ರತಿಮೆ ಅನಾವರಣ ಹಾಗೂ ವಿವಿಧ ಕಾರ್ಯಕ್ರಮಗಳ ಚಾಲನೆ ವೇಳೆ ಬಿಜೆಪಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿಕೆ ವಿರುದ್ಧ ಡಿ.ಕೆ.ಸುರೇಶ್ ಧ್ವನಿಯೆತ್ತಿದ್ರು. ನಿನ್ನೆ ಸಿಎಂ ಅವರ ಉಪಸ್ಥಿತಿಯಲ್ಲಿ ವೇದಿಕೆ ಮೇಲೆಯೇ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಡಿ.ಕೆ.ಸುರೇಶ್ ಮುಖ್ಯಮಂತ್ರಿಗಳಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಯಾರು? ಸರ್ಕಾರಿ ಕಾರ್ಯಕ್ರಮವನ್ನ ದುರುಪಯೋಗ ಪಡಿಸಿಕೊಂಡಿದ್ದು ಯಾರು? ಸಂವಿಧಾನಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ದಲಿತಪರ ಸಂಘಟನೆಗಳು & ಚಿಂತಕರನ್ನ ದೂರವಿಟ್ಟು ಕಾರ್ಯಕ್ರಮ ಮಾಡಿದ್ದು ಸರಿಯಾ? ಎಂದು ಅಶ್ವತ್ಥ್ ನಾರಾಯಣ್ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿಗಳಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಯಾರು?
ಸರ್ಕಾರಿ ಕಾರ್ಯಕ್ರಮವನ್ನ ದುರುಪಯೋಗ ಪಡಿಸಿಕೊಂಡಿದ್ದು ಯಾರು?
ಸಂವಿಧಾನಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ದಲಿತಪರ ಸಂಘಟನೆಗಳು & ಚಿಂತಕರನ್ನ ದೂರವಿಟ್ಟು ಕಾರ್ಯಕ್ರಮ ಮಾಡಿದ್ದು ಸರಿಯಾ?
1/2
— DK Suresh (@DKSureshINC) January 4, 2022
ಇದು ರಾಮನಗರ ಜಿಲ್ಲೆಯ ಜನರಿಗಾದ ಅಗೌರವ ಅಲ್ಲವೇ? ಈ ದುರ್ವರ್ತನೆಯನ್ನ ರಾಮನಗರದ ಜಿಲ್ಲೆಯವರಾದ ನಾವು ತೀವ್ರವಾಗಿ ಖಂಡಿಸುತ್ತೇವೆ. ಎಂದು ಟ್ವಿಟ್ಟರ್‌ನಲ್ಲಿ ಕೆಂಡಾಮಂಡಲರಾಗಿದ್ದಾರೆ.