National

ಮುಂಬೈನಲ್ಲಿ ಜನವರಿ 15ರವರೆಗೆ ಸೆಕ್ಷನ್‌ 144ವಿಸ್ತರಣೆ

ಮುಂಬೈ: ಓಮಿಕ್ರಾನ್‌ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ 2022 ಜನವರಿ 15ರವರೆಗೆ ಸೆಕ್ಷನ್‌ 144 ವಿಸ್ತರಿಸಲಾಗಿದೆ. ಸಂಜೆ ೫ರಿಂದ ಮುಂಜಾನೆ ೫ರವರೆಗೆ ಬೀಚ್‌ಗಳು, ತೆರೆದ ಮೈದಾನಗಳು, ವಾಯುವಿಹಾರ ಮತ್ತು ಇನ್ನಿತರ ಸಾರ್ವಜನಿಕ ಪ್ರದೇಶಗಳಿಗೆ ನಿರ್ಬಂಧ ಹೇರಲಾಗಿದೆ.

ಕೊರೊನಾ ವೈರಸ್‌ ದಿಢೀರ್‌ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಳಾಂಗಣ ಮತ್ತು ಬಹಿರಂಗ ಕಾರ್ಯಕ್ರಮದಲ್ಲಿ ೫೦ಕ್ಕಿಂತ ಹೆಚ್ಚು ಜನ ಭಾಗವಹಿಸದಂತೆ ನಿರ್ಬಂಧ ಹೇರಲಾಗಿದೆ.

ಅಂತ್ಯ ಸಂಸ್ಕಾರದಲ್ಲಿ 20 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

Share Post