ಬೆಂಗಳೂರಿನಲ್ಲಿ ಮಹಿಳೆಯ ಕಿಡ್ನಾಪ್; ದೂರು ಕೊಟ್ಟ ಯುವಕ!
ಬೆಂಗಳೂರು; ಪೀಣ್ಯ ಸುವರ್ಣ ನಗರ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲಾಗಿದೆ.. ಕಳೆದ ಶನಿವಾರ ರಾತ್ರಿ 11 ಗಂಟೆಯಲ್ಲಿ ಈ ಘಟನೆ ನಡೆದಿದೆ.. 6 ಜನರು ಕಾರೊಂದರಲ್ಲಿ ಬಂದು ಕಿಡ್ನಾಪ್ ಮಾಡಿದ್ದಾರೆ.. ಇದನ್ನು ನೋಡಿದ ಯುವಕ ಪೊಲೀಸರಿಗೆ ದೂರು ಕೊಟ್ಟಿದ್ದಾನೆ..
ಸತ್ಯಜಿತ್ ಚೌದರಿ ಎಂಬಾತ ಪೀಣ್ಯ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಸುಮಾರು 32 ವರ್ಷ ವಯಸ್ಸಿನ ಮಹಿಳೆ ಫೋನ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಯುವಕ ಹೇಳಿದ್ದಾನೆ..
ಹಳದಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಟಿಂಟೆಡ್ ಗ್ಲಾಸ್ ಕಾರ್ನಲ್ಲಿ ಕಿಡ್ನಾಪ್ ಮಾಡಲಾಗಿದೆ.