BengaluruCrime

ಒಂದೇ ಕುಟುಂಬದ ನಾಲ್ವರು ಸಾವು ಪ್ರಕರಣ; ಬಯಲಾಯ್ತು ಕಾರಣ

ಬೆಂಗಳೂರು; ಇಂದು ಬೆಳಗ್ಗೆ ಬೆಂಗಳೂರಿನ ರಾಜಾನುಕುಂಟೆ ಬಳಿಯ ಸಿಂಗನಾಯಕನಹಳ್ಳಿ ಬಳಿಯ ಯಡಿಯೂರಪ್ಪ ಕಾಲೋನಿಯಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದವು.. ಗಂಡನೇ ಹೆಂಡತಿ, ಇಬ್ಬರು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು.. ಆದ್ರೆ, ಈ ಸಾವಿಗೆ ಈಗ ನಿಖರ ಕಾರಣ ಗೊತ್ತಾಗಿದೆ..
ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್‌ ಕಲಬುರಗಿ ಮೂಲದವರು.. ಇವರು ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದರು.. ಆದ್ರೆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.. ಹೀಗಾಗಿ ಪತ್ನಿ ಮಮತಾ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ.. ಅವಿನಾಶ್‌ ಕ್ಯಾಬ್‌ ಚಾಲನೆ ಮಾಡುವ ಕೆಲಸಕ್ಕೆ ಹೋಗಿದ್ದ.. ಇದೇ ವೇಳೆ ನಿನ್ನೆ ಮಧ್ಯಾಹ್ನ ಪತ್ನಿ ಮಮತಾ ಗಂಡನಿಗೆ ಕರೆ ಮಾಡಿ ಮಾತನಾಡಿದ್ದಾಳೆ.. ಅನಂತರ ಸಂಜೆ ಅವಿನಾಶ್‌ ಕರೆ ಮಾಡಿದರೆ ರಿಸೀವ್‌ ಮಾಡಿಲ್ಲ.. ಪದೇ ಪದೇ ಕರೆ ಮಾಡಿದರೂ ರಿಸೀವ್‌ ಮಾಡಿಲ್ಲ. ಹೀಗೆ ಮನೆ ಮೇಲೆ ವಾಸವಿರುವವರೆ ಕರೆ ಮಾಡಿ, ಪತ್ನಿಗೆ ಫೋನ್‌ ನೀಡುವಂತೆ ಕೇಳಿದ್ದಾನೆ.. ಆದ್ರೆ ಅವರು ಎಷ್ಟು ಬಾಗಿಲು ಬಡಿದರೂ ಬಾಗಿಲು ತೆಗೆದಿಲ್ಲ.. ಎಲ್ಲೋ ಹೋಗಿರಬೇಕೆಂದು ಸುಮ್ಮನಾಗಿದ್ದಾರೆ..
ರಾತ್ರಿ 9 ಗಂಟೆಗೆ ಅವಿನಾಶ್‌ ಬಂದಿದ್ದು, ತನ್ನ ಬಳಿ ಇದ್ದ ಇನ್ನೊಂದು ಕೀ ಇಂದ ಬಾಗಿಲು ತೆಗೆದು ನೋಡಿದಾಗ ಇಬ್ಬರು ಮಕ್ಕಳು ನೆಲದಲ್ಲಿ ಸತ್ತು ಮಲಗಿದ್ದರೆ, ಪತ್ನಿ ಮಮತಾ ನೇಣಿಗೆ ಶರಣಾಗಿರುತ್ತಾರೆ.. ಇದರಿಂದ ಆತಂಕಗೊಂಡ ಅವಿನಾಶ್‌, ಪತ್ನಿಯನ್ನು ಕೆಳಗಿಳಿಸಿ ಮಕ್ಕಳ ಪಕ್ಕದಲ್ಲಿ ಮಲಗಿಸಿದ್ದಾನೆ.. ನಂತರ ಅದೇ ಹಗ್ಗಕ್ಕೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು.. ಆದ್ರೆ ದುಡಿಮೆ ಸಾಕಾಗುತ್ತಿರಲಿಲ್ಲ.. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು.. ಇದೇ ಇಷ್ಟೇ ಅವಾಂತರಕ್ಕೆ ಕಾರಣವಾಗಿದೆ ಎಂದು ಸಂಬಂಧಿಕರು ಹೇಳುತ್ತಿದ್ದಾರೆ..

Share Post