ಅಕ್ಟೋಬರ್ 17ಕ್ಕೆ ರಾಶಿ ಬದಲಿಸುವ ಸೂರ್ಯ; ಈ 4 ರಾಶಿಯವರಿಗೆ ಸುಖಯೋಗ!
ಬೆಂಗಳೂರು; ಸೂರ್ಯ ರಾಶಿ ಬದಲಿಸಿದಾಗ ಕೆಲವು ರಾಶಿಗಳವರಿಗೆ ಅದೃಷ್ಟವನ್ನುಂಟು ಮಾಡುತ್ತದೆ.. ಇದೇ ಅಕ್ಟೋಬರ್ 17ರಂದು ಬೆಳಗ್ಗೆ 7.47ಕ್ಕೆ ಸರಿಯಾಗಿ ಸೂರ್ಯ ರಾಶಿ ಬದಲಾವಣೆ ಮಾಡಲಿದ್ದಾನೆ.. ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ.. ಈ ಅವಧಿಯಲ್ಲಿ ಮೇಷ, ತುಲಾ, ಕುಂಭ ಹಾಗೂ ಮಿಥುನ ರಾಶಿಯವರಿಗೆ ಉತ್ತಮ ಫಲಗಳು ಸಿಗಲಿವೆ.. ಆರ್ಥಿಕವಾಗಿ, ಸಾಮಾಜಿಕವಾಗಿ ಈ ರಾಶಿಯವರು ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ..
ಮೇಷ ರಾಶಿ;
ತುಲಾ ರಾಶಿಗೆ ಸೂರ್ಯ ಪ್ರವೇಶ ಮಾಡೋದ್ರಿಂದ ಮೇಷ ರಾಶಿಯವರಿಗೆ ಸಾಕಷ್ಟು ಅನುಕೂಲವಾಗಲಿದೆ.. ಮೇಷ ರಾಶಿಯವರಿಗೆ ಎಲ್ಲಾ ವಿಷಯಗಳಲ್ಲೂ ಶುಭವಾಗಲಿದೆ.. ನಾಯಕತ್ವದ ಗುಣಗಳು ಹೆಚ್ಚಾಗಲಿವೆ.. ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ.. ಎಲ್ಲರ ಬೆಂಬಲವೂ ಸಿಕ್ಕಿ, ಹಿಡಿದ ಕೆಲಸಗಳೆಲ್ಲಾ ಚೆನ್ನಾಗಿ ಆಗುತ್ತವೆ.. ಮನೆಯಲ್ಲಿ ಸುಖ ಶಾಂತಿ ನೆಲೆಸಲಿದೆ.. ಆದ್ರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ..
ತುಲಾ ರಾಶಿ;
ಸೂರ್ಯ ಪ್ರವೇಶದ ನಂತರ ತುಲಾ ರಾಶಿಯವರಿಗೂ ಈ ದಿನಗಳು ತುಂಬಾ ಮಂಗಳಕರವಾಗಿರುತ್ತವೆ.. ಆದರೂ ಇವರಿಗೆ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಬರಬಹುದು.. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.. ಚರ್ಮ, ನೇತ್ರ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಅಪಾಯವಿದೆ.. ಕೌಟುಂಬಿಕ ಜೀವನದಲ್ಲಿ ಒತ್ತಡವೂ ಹೆಚ್ಚಾಗಬಹುದು.. ಆದ್ರೆ ಹಲವು ಸವಾಲು ಎದುರಾದರೂ ಹಣಕಾಸಿನ ವಿಚಾರದಲ್ಲಿ ಹೆಚ್ಚು ಸಮಸ್ಯೆಗಳಾಗೋದಿಲ್ಲ..
ಕುಂಭ ರಾಶಿ;
ಅಕ್ಟೋಬರ್ 17ರಿಂದ ಕುಂಭ ರಾಶಿಯವರಿಗೆ ಅತ್ಯಂತ ಶುಭಕರವಾದುದು.. ಹಣಕಾಸಿನ ಸ್ಥಿತಿ ಕೂಡಾ ತುಂಬಾನೇ ಚೆನ್ನಾಗಿರುತ್ತದೆ.. ಬರಬೇಕಿದ್ದ ಹಣವೆಲ್ಲಾ ವಾಪಸ್ ಬರಲಿದೆ.. ಸಮಾಜದಲ್ಲಿ ಉತ್ತಮ ಹೆಸರು ಸಿಗಲಿದೆ.. ಹೊಸ ಜನರ ಭೇಟಿಯಿಂದ ಸಾಕಷ್ಟು ಅನುಕೂಲವಾಗಲಿದೆ.. ಹಿಡಿದ ಕೆಲಸಗಲೆಲ್ಲಾ ಕೈಗೂಡುವುದರಿಂದ ಆರ್ಥಿಕವಾಗಿ ಸಾಕಷ್ಟು ಸಬಲರಾಗುತ್ತೀರಿ..
ಮಿಥುನ ರಾಶಿ;
ಮಥುನ ರಾಶಿಯಲ್ಲಿ ಸೂರ್ಯ ಐದನೇ ಮನೆಗೆ ಪ್ರವೇಶ ಮಾಡುತ್ತಾನೆ.. ಇದರಿಂದಾಗಿ ಮಿಥುನ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳು ಆಗಲಿವೆ.. ಆಧ್ಯಾತ್ಮ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೀರಿ.. ನಿರುದ್ಯೋಗಿಗಳಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ..