LifestyleNational

ಒಂದೇ ಕುಟುಂಬದ ನಾಲ್ವರು ಹೆಣ್ಣು ಮಕ್ಕಳಿಗೂ ಉಚಿತ MBBS ಸೀಟು!

ಹೈದರಾಬಾದ್‌; ಹೆಣ್ಣು ಮಕ್ಕಳು ಅಂದ್ರೆ ಪೋಷಕರಿಗೆ ಅದೇನೋ ನಿರ್ಲಕ್ಷ್ಯ.. ಬಹುತೇಕರು ಗಂಡು ಮಗುವೇ ಬೇಕೆಂದು ಬಯಸುತ್ತಾರೆ.. ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸುವವರು ಕೂಡಾ ಕಡಿಮೆಯೇ.. ಆದ್ರೆ ಇಲ್ಲೊಂದು ದಂಪತಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿದ್ದಾರೆ.. ಅದರ ಪ್ರತಿಫಲವಾಗಿ ನಾಲ್ವರೂ ಹೆಣ್ಣು ಮಕ್ಕಳು MBBSಗೆ ಸರ್ಕಾರಿ ಸೀಟು ಗಳಿಸಿಕೊಂಡಿದ್ದಾರೆ.. ಈ ಮೂಲಕ ಒಂದೇ ಮನೆಯ ನಾಲ್ವರು ಹೆಣ್ಣು ಮಕ್ಕಳೂ ವೈದ್ಯರಾಗುತ್ತಿದ್ದಾರೆ..
ತೆಲಂಗಾಣದ ಸಿದ್ದಿಪೇಟೆಯ ಕೊಂಕು ರಾಮಚಂದ್ರಂ ಹಾಗೂ ಶಾರದಾ ದಂಪತಿಯ ಪುತ್ರಿಯರೇ ಈ ಸಾಧನೆ ಮಾಡಿರುವವರು.. ಈ ದಂಪತಿಯ ಹಿರಿಯ ಮಗಳಾದ ಮಮತಾ 2018ರಲ್ಲಿ ಉಚಿತ MBBS ಸೀಟು ಪಡೆದು ತಮ್ಮ ಅಧ್ಯಯನ ಪೂರ್ಣಗೊಳಿಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.. ಎರಡನೇ ಮಗಳು ಮಾಧವಿ ಕೂಡಾ ಅಕ್ಕನ ಹಾದಿಯಲ್ಲೇ ಓದಿ 2020ರಲ್ಲಿ MBBS ಫ್ರೀ ಸೀಟು ಪಡೆದು ಅದ್ಯಯನ ಮುಂದುವರೆಸಿದ್ದಾರೆ.. ಉಳಿದ ಇಬ್ಬರು ಪುತ್ರಿಯರಾದ ರೋಹಿಣಿ ಹಾಗೂ ರೋಷಿಣಿ ಕೂಡಾ ಈ ಬಾರಿ ಉಚಿತ ಎಂಬಿಬಿಎಸ್‌ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.. ತಮ್ಮ ಮಕ್ಕಳ ಈ ಸಾಧನೆಗೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯೇ ಕಾರಣವೆಂದು ತಂದೆ ರಾಮಚಂದ್ರಂ ಹೇಳಿದ್ದಾರೆ..
ಕೆಸಿಆರ್‌ ಸಿಎಂ ಆಗಿದ್ದಾಗ ಸಿದ್ದಿಪೇಟ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗಿತ್ತು.. ಇದರಿಂದ ಬಡವರು ಕೂಡಾ ಇಲ್ಲಿ ಓದಲು ಅನುಕೂಲವಾಗಿದೆ ಎಂದಿರುವ ಬಾಲಕಿಯರ ಪೋಷಕರು ಮಾಜಿ ಸಚಿವ ಟಿ.ಹರೀಶ್‌ ರಾವ್‌ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ..

Share Post