BengaluruCrime

ಆಟೋಗೆ ಹೆಚ್ಚಿನ ಹಣ ನೀಡದ್ದಕ್ಕೆ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಬೆಂಗಳೂರು; ಇತ್ತೀಚೆಗೆ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ ಯುವತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು.. ಇದೀಗ ಅಂತಹದ್ದೇ ಒಂದು ಪ್ರಕರಣ ವರದಿಯಾಗಿದೆ.. ಈ ಬಾರಿ ಹೆಚ್ಚಿನ ಹಣ ನೀಡಲು ನಿರಾಕರಿಸಿದ್ದಕ್ಕೆ ಆಟೋ ಚಾಲಕನೊಬ್ಬ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ..
ಯುವತಿ ಸಿಲ್ಕ್‌ಬೋರ್ಡ್‌ಗೆ ಆಟೋ ಕೇಳಿದ್ದಾಳೆ.. ಬಾಡಿಗೆ ಎಷ್ಟು ಎಂದು ಕೇಳಿದ್ದಾಳೆ.. ಅದಕ್ಕೆ ಆಟೋ ಚಾಲಕ ಮೀಟರ್‌ ಮೇಲೆ ಹೆಚ್ಚಿನ ಹಣ ಕೊಡಬೇಕೆಂದು ಹೇಳಿದ್ದಾನೆ.. ಅದಕ್ಕೆ ಯುವತಿ ಮೀಟರ್‌ಗಿಂತ ಹೆಚ್ಚಿನ ಹಣ ಕೊಡೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾಳೆ.. ಅದಕ್ಕೆ ಆಟೋ ಚಾಲಕ ಸಿಲ್ಕ್‌ ಬೋರ್ಡ್‌ ಏನು ಇಲ್ಲೇ ಇದೆಯಾ ಎಂದು ಕೇಳುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.. ಯುವತಿಗೆ ನಿಂದನೆ ಮಾಡಿ ಅಲ್ಲಿಂದ ಹೊರಟಿದ್ದಾನೆ.. ಇದರ ವಿಡಿಯೋವನ್ನು ಚಿತ್ರೀಕರಣ ಮಾಡಿಕೊಂಡಿದ್ದು, ಎಕ್ಸ್‌ ಖಾತೆಯಲ್ಲಿ ಟ್ಯಾಗ್‌ ಮಾಡಿದ್ದಾಳೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..
ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

Share Post