CrimeDistricts

ಫಾರ್ಚೂನರ್‌ ಕಾರಿನಲ್ಲಿ ಬಂದು ಹಸು ಕಳ್ಳತನ!

ಶಿವಮೊಗ್ಗ; ಟೆಂಪೋಗಳನ್ನು ಬಂದು ಹಸುಗಳನ್ನು ಕದ್ದುಕೊಂಡು ಹೋಗುವವರನ್ನು ನೋಡಿದ್ದೇವೆ.. ಆದ್ರೆ ಶಿವಮೊಗ್ಗದಲ್ಲಿ ಐಶಾರಾಮಿ ಫಾರ್ಚೂನರ್‌ ಕಾರಿನಲ್ಲಿ ಹಸು ಕಳ್ಳರು ಬಂದಿದ್ದಾರೆ.. ಫಾರ್ಚೂನರ್‌ ಕಾರಿನಲ್ಲಿ ಹಸುವನ್ನು ಕದ್ದು ಪರಾರಿಯಾಗಿದ್ದಾರೆ.. ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಈ ಘಟನೆ ನಡೆದಿದೆ.. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ..
KA 01 MZ 5843 ನಂಬರಿನ ಬೂದು ಬಣ್ಣದ ಟಯೋಟಾ ಫಾರ್ಚೂನರ್‌ ಕಾರಿನಲ್ಲಿ ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಕಳ್ಳರು, ಮನೆಯೊಂದರ ಮುಂದಿದ್ದ ಹಸುವನ್ನು ಕಳ್ಳತನ ಮಾಡಿಕೊಂಡು ಕಾರಿನಲ್ಲೇ ತುಂಬಿಕೊಂಡು ಹೋಗಿದ್ದಾರೆ.. ಹಸು ಕದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು ಕಾರನ್ನು ಅಡ್ಡ ಹಾಕಿ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ.. ಆದ್ರೆ ಜನರ ಮೇಲೆಯೇ ಕಾರು ಯತ್ನಿಸುವ ಯತ್ನ ಮಾಡಿದ್ದಾರೆ..
ಜನ ಪಕ್ಕಕ್ಕೆ ಸರಿಯುತ್ತಿದ್ದಂತೆ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.. ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

Share Post