CrimeDistricts

ಪತ್ನಿಯ ಜೊತೆ ಸಿಕ್ಕಿಬಿದ್ದ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಗಂಡ!

ಬೀದರ್; ಆಕೆಗೆ ಮದುವೆಯಾಗಿತ್ತು.. ಆದರೂ ಕೂಡಾ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.. ಗಂಡನಿಗೆ ಗೊತ್ತಾಗದಂತೆ ವ್ಯವಹಾರ ನಡೆಸಿದ್ದಳು.. ಆದ್ರೆ ಅವರ ಗುಟ್ಟಿನ ವ್ಯವಹಾರ ರಟ್ಟಾಗಿದೆ.. ಗಂಡನ ಕೈಗೆ ಇಬ್ಬರು ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.. ಇದರಿಂದ ಕೆರಳಿದ ಗಂಡ, ಹೆಂಡತಿ ಜೊತೆ ಮಲಗಿದ್ದ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾನೆ..
ಬೀದರ್‌ ಬಳಿಯ ಬಂಬುಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. 28 ವರ್ಷ ಸುನೀಲ್‌ ಎಂಬಾತನೇ ದಾಳಿಗೊಳಗಾದ ಯುವಕ.. ಈತ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿಯ ಈತನ ಮರ್ಮಾಂಗ ಕತ್ತರಿಸಲು ಯತ್ನಿಸಿದ್ದು, ಈತ ತೀವ್ರವಾಗಿ ಗಾಯಗೊಂಡಿದ್ದಾನೆ.. ಪತಿ ಮನೆಯಲ್ಲಿರಲಿಲ್ಲ.. ಬೇರೆ ಊರಿಗೆ ಹೋಗಿದ್ದ.. ಇದೇ ಸಂದರ್ಭ ನೋಡಿಕೊಂಡ ಪತ್ನಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು.. ಆದ್ರೆ ಪತಿ ಅನುಮಾನದ ಮೇರೆಗೆ ಗುಟ್ಟಾಗಿ ಮನೆಗೆ ವಾಪಸ್ಸಾಗಿದ್ದಾನೆ..
ಈ ವೇಳೆ ಇಬ್ಬರೂ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.. ಇದರಿಂದ ಆಕ್ರೋಶಗೊಂಡ ಪತಿ ಆತನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾನೆ.. ಸಾಲದೆಂಬಂತೆ ರಾತ್ರಿಯಿಡೀ ಮನೆಯಲ್ಲೇ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ.. ರಾತ್ರಿಯಿಡೀ ಥಳಿಸಲಾಗಿದೆ.. ಯುವಕ ಸುನಿಲ್‌ ಜೀವಾಪಾಯದಿಂದ ಪಾರಾಗಿದ್ದಾನೆ.. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.. ಚಿಟಗುಪ್ಪ ಪೊಲೀಸ್‌ ಸ್ಟೇಷನ್‌ನಲ್ಲಿ ಈ ಬಗ್ಗೆ ಕೇಸ್‌ ದಾಖಲಾಗಿದೆ..

Share Post