LifestyleNational

ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿದ್ದ ಟೆಕ್ಕಿ!; ತಾಳ್ಮೆ ಆತನನ್ನು ಮತ್ತೆ ದಾರಿಗೆ ತಂದಿದೆ!

ಚೆನ್ನೈ; ಸಾಫ್ಟ್‌ವೇರ್‌ ಉದ್ಯೋಗ ಅನ್ನೋದು ನೀರಿನ ಮೇಲೆ ಗುಳ್ಳೆ ಇದ್ದಂಗೆ.. ಕೆಲಸ ಇದ್ದಷ್ಟು ದಿನ ಚೆನ್ನಾಗಿ ದುಡಿಮೆ ಇರುತ್ತೆ.. ಆದ್ರೆ, ಕೆಲಸ ಯಾವಾಗ ಹೋಗುತ್ತೋ ಗೊತ್ತಿರೋದಿಲ್ಲ.. ಕಂಪನಿಗಳು ಇದ್ದಕ್ಕಿದ್ದಂತೆ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಬಿಡುತ್ತವೆ.. ಹಾಗೆ, ಕೆಲಸ ಕಳೆದುಕೊಂಡ ಎಷ್ಟೋ ಮಂದಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ.. ಆದ್ರೆ ಇಲ್ಲೊಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌, ಯಾವ ಕೆಲಸ ಆದರೆ ಏನು ಎಂದು ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡೋದಕ್ಕೆ ಶುರು ಮಾಡಿದ್ದಾನೆ.. ತನ್ನಿಷ್ಟದ ಕೆಲಸ ಸಿಗುವವರೆಗೂ ಡೆಲಿವರಿ ಬಾಯ್‌ ಆಗಿ ಬದುಕು ಕಟ್ಟಿಕೊಂಡಿದ್ದಾನೆ.. ಈಗ ಮತ್ತೆ ತನಗೆ ಬೇಕಾದ ಕೆಲಸ ಸಿಕ್ಕಿದೆ.. ಹೀಗಾಗಿ ಮತ್ತೆ ಖುಷಿಯ ಜೀವನ ಶುರುವಾಗಿದೆ..
ಚೆನ್ನೈನಲ್ಲಿ ಎಂಜಿನಿಯರ್‌ ಆಗಿದ್ದ ರಿಯಾಜುದ್ದಿನ್‌, ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಡೆವೆಲಪರ್‌ ಆಗಿ ಕೆಲಸ ಮಾಡುತ್ತಿದ್ದರು.. ಆದ್ರೆ ಆ ಕಂಪನಿ ಇದ್ದಕ್ಕಿದ್ದಂತೆ ಅವರನ್ನು ಕೆಲಸದಿಂದ ವಜಾ ಮಾಡಿತ್ತು.. ಅದರಿಂದ ಅವರು ದೃತಿಗೆಡಲಿಲ್ಲ.. ಬದಲಾಗಿ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿದರು.. ತಾಳ್ಮೆಯಿಂದ ಜೀವನ ನಡೆಸಿದರು.. ಸತತ ಪ್ರಯತ್ನದ ಫಲವಾಗಿ ಈಗ ಮತ್ತೊಂದು ಉತ್ತಮ ಕೆಲಸ ಸಿಕ್ಕಿದೆ.. ಹೀಗಾಗಿ ಖುಷಿಯಿಂದ ಈಗ ಅವರು ತಮ್ಮ ಕೆಲಸಕ್ಕೆ ಸೇರಿಕೊಂಡಿದ್ದಾರೆ.. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ಕೆಲಸ ಕಳೆದುಕೊಂಡಾಗ ಸ್ವಿಗ್ಗಿ ಕೈಹಿಡಿದಿದ್ದು ನೆನಪಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಸ್ವಿಗ್ಗಿಗೆ ವಿದಾಯ ಹೇಳುವುದನ್ನೂ ಮರೆತಿಲ್ಲ..

 

Share Post