ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಇಲ್ಲಿ ಹೆತ್ತವರೇ ಹರಾಜು ಹಾಕುತ್ತಾರೆ..!
ಮಧ್ಯಪ್ರದೇಶ; ಪ್ರಪಂಚ ಎಷ್ಟೇ ಮುಂದುವರೆದರೂ ಮೂಢನಂಬಿಕೆಗಳನ್ನು, ಅನಾಚಾರಗಳು ಮಾತ್ರ ನಿಂತಿಲ್ಲ.. ಇದಕ್ಕೆ ಉದಾಹರಣೆ ಮಧ್ಯಪ್ರದೇಶ.. ಮಧ್ಯಪ್ರದೇಶದ ಬುಡಕಟ್ಟು ಜನಾಂಗವೊಂದರಲ್ಲಿ ಹೆಣ್ಣು ಮಕ್ಕಳನ್ನು ಪೋಷಕಕರೇ ಹರಾಜಿನಲ್ಲಿ ಮಾರಾಟ ಮಾಡುತ್ತಾರೆ.. ಮದುವೆಯಾಗುವವರು ಹೆಣ್ಣು ಮಕ್ಕಳನ್ನು ಹರಾಜಿನಲ್ಲಿ ಬಿಡ್ ಮಾಡಿ ಖರೀದಿ ಮಾಡಿಕೊಂಡು ಹೋಗುತ್ತಾರೆ.. ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ..
ಮಧ್ಯಪ್ರದೇಶದ ರಾಜ್ಗಢ್ನಲ್ಲಿನ ಒಂದು ಬುಡಕಟ್ಟು ಜನಾಂಗದಲ್ಲಿ ಈ ಅನಿಷ್ಟ ಪದ್ಧತಿ ಇದೆ.. ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಅವರ ಕುಟುಂಬದವರೇ ಮುಂದೆ ನಿಂತು ಹರಾಜು ಹಾಕುತ್ತಾರೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರಿಗೆ ಈ ವಿಚಾರ ತಿಳಿದಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ.. ಜಗಡಾ ನಾಥರಾ ಎನ್ನುವ ಸಂಪ್ರದಾಯದಂತೆ ಮಕ್ಕಳನ್ನು ಹರಾಜು ಹಾಕಲಾಗುತ್ತದೆ..
ಮಗಳಿಗೆ ಬಿಡ್ಡಿಂಗ್ ನಡೆದು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮಗಳನ್ನು ಒಪ್ಪಿಸಲಾಗುತ್ತದೆ.ಈ ಗ್ರಾಮದಲ್ಲಿ ಮದುವೆಯಾದ ಅಥವಾ ಮದುವೆಯಾಗಲಿರುವ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ. ಈ ಪದ್ಧತಿಯಲ್ಲಿ ಮೊದಲು ಮಹಿಳೆ ಬಾಲ್ಯವಿವಾಹಕ್ಕೆ ಒಳಗಾಗುತ್ತಾಳೆ.