ಮನೆಗೆ ಬರುವಂತೆ ಮೆಸೇಜ್ ಮಾಡುತ್ತಾರೆ; ಬಾಲಿವುಡ್ ಹೀರೋಗಳ ವಿರುದ್ಧ ಕಂಗನಾ ಬಾಂಬ್!
ಮುಂಬೈ; ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.. ಈ ಬೆನ್ನಲ್ಲೇ ಹಲವಾರು ನಟಿಯರು ಚಿತ್ರೀಕರಣ ಸ್ಥಳದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.. ಇದೀಗ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ಕೂಡಾ ತಮಗಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.. ಬಾಲಿವುಡ್ ಹೀರೋಗಳ ವಿರುದ್ಧ ಆಕ್ರೋಶದ ಮಾತುಗಳನ್ನಾಗಿದ್ದಾರೆ..
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ಬಾಲಿವುಡ್ ನಟರು, ಮಹಿಳಾ ಕಲಾವಿದರಿಗೆ ಕಿರುಕುಳ ನೀಡುವ ವಿಚಾರ ಮಾತನಾಡಿದ್ದಾರೆ.. ಬಾಲಿವುಡ್ ನಟರು, ಮಹಿಳಾ ಕಲಾವಿದರನ್ನು ಊಟಕ್ಕೆ ಕರೆಯುತ್ತಾರೆ.. ಪದೇ ಪದೇ ಮೆಸೇಜ್‌ಗಳನ್ನು ಮಾಡುತ್ತಾರೆ.. ಮನೆಗೆ ಬರುವಂತೆ ದುಂಬಾಲು ಬೀಳುತ್ತಾರೆ ಎಂದು ಕಂಗನಾ ಆರೋಪ ಮಾಡಿದ್ದಾರೆ.. ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್ ಅಂಡ್ ಮರ್ಡರ್ ಕೇಸ್ ಬಗ್ಗೆ ಮಾತನಾಡಿರುವ ಕಂಗನಾ, ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಗೌರವವೇ ಇಲ್ಲ.. ಚಿತ್ರರಂಗ ಕೂಡಾ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದರು..
ಕಾಲೇಜುಗಳಲ್ಲಿ ಹುಡುಗರು ಹುಡುಗಿಯರಿಗೆ ಕಮೆಂಟ್‌ಗಳನ್ನು ಮಾಡುತ್ತಾರೆ.. ಸಿನಿಮಾದಲ್ಲಿ ಹೀರೋಗಳು ಕೂಡಾ ಇದಕ್ಕೆ ಕಡಿಮೆ ಇಲ್ಲ.. ಚಿತ್ರೀಕರಣದ ಸ್ಥಳದಲ್ಲಿ ಮಹಿಳಾ ಕಲಾವಿದರನ್ನು ಹೇಗೆ ಟ್ರೀಟ್ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿದೆ ಎಂದು ಕಂಗನಾ ಹೇಳಿದ್ದಾರೆ..